ಯಾದಗಿರಿ: ಮತ್ತೊಮ್ಮೆ ಬಸವಸಾಗರ ಡ್ಯಾಂ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಡ್ಯಾಂನಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.
Advertisement
ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 10 ಕ್ರಸ್ಟ್ ಗೇಟ್‍ಗಳ ಮೂಲಕ 1.1 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಇದನ್ನೂ ಓದಿ: ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ
Advertisement
Advertisement
ಸದ್ಯದ ಡ್ಯಾಂಗೆ 85 ಸಾವಿರ ಕ್ಯೂಸೆಕ್ ನೀರು ಇದೆ. 492.25 ಮೀ. ಎತ್ತರದ ಜಲಾಶಯದಲ್ಲಿ ಸದ್ಯ 492.01 ಮೀಟರ್ ಅಂದರೆ 31 ಟಿಎಂಸಿ ಸದ್ಯ ನೀರು ಸಂಗ್ರಹವಾಗಿದೆ. ಹೀಗಾಗಿ ನೀರನ್ನು ಹೊರಬಿಡಲಾಗಿದೆ. ನದಿ ಪಾತ್ರದ ಜನರಲ್ಲಿ ಇದೀಗ ಮತ್ತೆ ಭಯ ಶುರುವಾಗಿದೆ.