ಗದಗ: ವಾಡಿ ರೈಲ್ವೆ ಮಾರ್ಗದಲ್ಲಿ ಗದಗದಿಂದ ಕುಷ್ಟಗಿವರೆಗೆ (Kushtagi) ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraja Rayareddy) ಹೇಳಿದರು.
ಸಂಸದ ರಾಜಶೇಖರ ಹಿಟ್ನಾಳ್ (Chandrashekhar Hitnal) ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗದಗದಿಂದ ಕುಷ್ಟಗಿವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ರೈಲು ಓಡಿಸಲಾಗಿದೆ. ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇವೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಜೊತೆಗೆ ಮಾತನಾಡಿ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡಲಾಗುವುದು ಎಂದರು. ಇದನ್ನೂ ಓದಿ: ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ – ಟ್ರಂಪ್ ಯೂಟರ್ನ್
ರೈಲ್ವೆ ಸಚಿವರ ಸಮಯ ನೋಡಿಕೊಂಡು ಯಲಬುರ್ಗಾ ಅಥವಾ ಕುಷ್ಟಗಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಿಗದಿ ಮಾಡಲಾಗುವುದು. ಇದೀಗ ಕುಷ್ಟಗಿಯಿಂದ ಸುರಪುರದವರೆಗೆ ಒಂದೇ ಟೆಂಡರ್ ಕರೆದಿದ್ದಾರೆ. ಮುಂದಿನ 3 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ಯಲಬುರ್ಗಾ ತಾಲೂಕು ಇಟಗಿ (Itagi) ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಮಂಜೂರಾಗಿದೆ. ಐತಿಹಾಸಿಕ ಸ್ಥಳ ಇಟಗಿಯಲ್ಲಿ ಇಟಗಿ ಮಹದೇವ್ ರೈಲ್ವೆ ನಿಲ್ದಾಣ ಎಂಬ ಹೆಸರಿನಲ್ಲಿ ನಿರ್ಮಾಣ ಆಗಲಿದೆ. ರಾಜ್ಯ ಸರ್ಕಾರ ಅರ್ಧ ಹಣ ಕೊಟ್ಟು ಭೂಮಿ ನೀಡುತ್ತಿದೆ ಎಂದರು. ಇದನ್ನೂ ಓದಿ: ಬ್ರಾಹ್ಮಣರ ಸಂಖ್ಯೆ 15 ಲಕ್ಷ ಅಲ್ಲ, ನಮ್ಮ ಸಂಖ್ಯೆ 45 ಲಕ್ಷ: ಅಶೋಕ್ ಹಾರನಹಳ್ಳಿ
ಗದಗ-ವಾಡಿ ರೈಲ್ವೆ ಯೋಜನೆಗೆ ಅಗತ್ಯ ಇರುವ ಪೂರ್ಣ ಪ್ರಮಾಣದ ಭೂಸ್ವಾಧೀನ ಆಗಿದೆ. ಗದಗ-ವಾಡಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯಲ್ಲಿ ಅಂಡರ್‌ಪಾಸ್ ಕೆಲಸದಲ್ಲಿ ತಾಂತ್ರಿಕ ಸಮಸ್ಯೆ ಆಗಿರುವ ಹಾಗೂ ಕಳಪೆ ಕಾಮಗಾರಿ ನಡೆದ ಬಗ್ಗೆ ಮಾಹಿತಿ ಇದೆ. ಕೂಡಲೇ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಆರಂಭದಲ್ಲಿ ಕೇವಲ 2 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಇದಾಗಿತ್ತು. ಇದೀಗ 4 ಸಾವಿರ ಕೋಟಿ ರೂ.ವರೆಗೆ ಹೆಚ್ಚುವರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ
ಮುನಿರಾಬಾದ್‌ನಿಂದ ಮೆಹಬೂಬ್ ರೈಲ್ವೆ ಮಾರ್ಗದ ಯೋಜನೆ ಕರ್ನಾಟಕದಲ್ಲಿ ಸಿಂಧನೂರುವರೆಗೆ ಪೂರ್ಣಗೊಂಡು, ಅಲ್ಲಿಂದ ರಾಯಚೂರುವರೆಗೆ ಕಾಮಗಾರಿ ನಡೆಯುತ್ತಿದೆ. ಆಂಧ್ರದಲ್ಲಿ ಈ ಲೈನ್ ಕಂಪ್ಲೀಟ್ ಆಗಿದೆ. ಕರ್ನಾಟಕದಲ್ಲಿ ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬ ಆಗಿತ್ತು. ಖರ್ಗೆ ಅವರ ಒತ್ತಾಸೆಯಿಂದ ಯೋಜನೆ ಮಂಜೂರಾಗಿತ್ತು ಎಂದು ಮಾಹಿತಿ ನೀಡಿದರು.