ಬೆಂಗಳೂರು/ದೊಡ್ಡಬಳ್ಳಾಪುರ: ನಾಡಿನೆಲ್ಲಡೆ ದಸರಾ ಹಬ್ಬದ ಸಂಭ್ರಮ ಆಯುಧ ಪೂಜೆ ನಡೆಯುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಮಗನ ಫ್ಯಾಕ್ಟರಿಯಲ್ಲಿ ಆಯುಧಪೂಜೆ ಆಚರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಗ ಭರತ್ ಉಸ್ತುವಾರಿಯ ಮ್ಯಾಗ್ನಟಿಕ್ ಇಂಜಿನಿಯರ್ಸ್ ಫ್ಯಾಕ್ಟರಿಗೆ ಪತ್ನಿ ಚೆನ್ನಮ್ಮ ಜೊತೆ ಆಗಮಿಸಿ ಬಸವರಾಜ ಬೊಮ್ಮಾಯಿ ಅವರು ಪೂಜೆ ನೇರವೇರಿಸಿದರು. ಇದನ್ನೂ ಓದಿ: ಸಿಎಂ ನೈತಿಕ ಪೊಲೀಸ್‍ಗಿರಿಗೆ ಪುಷ್ಠಿ ನೀಡುವಂತೆ ಮಾತನಾಡಿದ್ದಾರೆ: ರಮಾನಾಥ ರೈ
ಕಾರ್ಮಿಕರಿಗೆ ದಸರಾ ಹಬ್ಬದ ಶುಭಾಶಯ ಕೋರಿದ ಸಿಎಂ, ಕಾರ್ಮಿಕರಿಗೆ ಉಡುಗೊರೆ ಹಾಗೂ ಸಿಹಿ ಹಂಚಿಕೆ ಮಾಡಿದರು. ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಉಪವಿಭಾಧಿಕಾರಿ ಅರುಳ್ ಕುಮಾರ್, ಡಿವೈಎಸ್‍ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಇನ್ಸ್‌ಪೆಕ್ಟರ್ ಸತೀಶ್ ಮತ್ತಿತರರು ಕಾರ್ಖಾನೆಗೆ ಆಗಮಿಸಿ ಸ್ವಾಗತ ಕೋರಿದರು. ಇದನ್ನೂ ಓದಿ: ಭಾರೀ ಮಳೆಗೆ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ – ರೈತ ಕಂಗಾಲು