ಬೆಂಗಳೂರು : ಇಂದಿನ ಯುವನಾಯಕರಿಗೆ ಕೆ.ಸಿ.ರೆಡ್ಡಿಯವರ ಬದುಕು ಮಾರ್ಗದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು, ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿಯವರ ದೂರದೃಷ್ಟಿಯಿರುವ ಹಿರಿಯ ನಾಯಕರು. ಕೆ.ಸಿ.ರೆಡ್ಡಿಯವರು ಹಾಕಿರುವ ಆಡಳಿತದ ಅಡಿಪಾಯದಿಂದ ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು ಎಂದರು. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ
Advertisement
ಉತ್ತಮ ಆಡಳಿತಗಾರರಾದ ಕೆ.ಸಿ.ರೆಡ್ಡಿಯವರ ಆದರ್ಶಗಳು, ತತ್ವಗಳು, ಸಾರ್ವಜನಿಕ ಬದುಕಿನ ರೀತಿ, ಜನರ ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸುವ ಬಗೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಆಡಳಿತಾವಧಿಯಲ್ಲಿ ಪ್ರಾದೇಶಿಕ, ಸಾಮಾಜಿಕ ಅಸಮತೋಲನ ನಿವಾರಣೆಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಡ್ರೆಸ್ ಕೋಡ್ ಕಡ್ಡಾಯ!
Advertisement
ಮುಖ್ಯಮಂತ್ರಿ @BSBommai ಅವರು ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರಾದ @NiraniMurugesh, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ @mla_sudhakar, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಗಳು, ಉಪಸ್ಥಿತರಿದ್ದರು. pic.twitter.com/qvsvY6oVgw
— CM of Karnataka (@CMofKarnataka) February 27, 2022
Advertisement
ಕೋಲಾರ ಜಿಲ್ಲೆಯ ಕೆ.ಸಿ.ರೆಡ್ಡಿಯವರು ವೈಜ್ಞಾನಿಕ ಚಿಂತನೆಯ ವ್ಯಕ್ತಿ.ಕರ್ನಾಟಕ ರಾಜ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮ್ಯದ ಬಿಹೆಚ್ಇಎಲ್, ಬಿಎಂಎಲ್ ಹೆಚ್ ಎ ಎಲ್ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲು ಕಾರಣರಾದರು. ಹೊಸ ತಂತ್ರಜ್ಞಾನದಿಂದ ಹೊಸ ಚಿಂತನೆಗೆ ನಾಂದಿ ಹಾಡಿದ್ದರು. ಇದರಿಂದಾಗಿ ನಮ್ಮ ರಾಜ್ಯ ಐಟಿಬಿಟಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಹಕಾರಿಯಾಯಿತು ಎಂದರು. ಇದನ್ನೂ ಓದಿ: ಕನ್ನಡಿಗರ ರಕ್ಷಣೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ: ಬೊಮ್ಮಾಯಿ
Advertisement
ಉದ್ಯಮಗಳಲ್ಲಿದ್ದ ಆರ್ ಎಂಡ್ ಡಿ, ರಾಜ್ಯದಲ್ಲಿ ಇಂದಿನ ತಂತ್ರಜ್ಞಾನದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದೆ. ಸದಾ ಸ್ಮರಣೀಯರಾದ ಕೆ.ಸಿ.ರೆಡ್ಡಿಯವರ ಜೀವನಾದರ್ಶಗಳು ಸದಾಕಾಲ ಪ್ರೇರಣಾದಾಯಕ ಎಂದು ತಿಳಿಸಿದರು. ಕೆ.ಸಿ.ರೆಡ್ಡಿ ಪ್ರತಿಮೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅವರು, ಕೆ.ಸಿ.ರೆಡ್ಡಿಯವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.