ಕೊಪ್ಪಳ: ನಮಗೆ ಗ್ಯಾರಂಟಿ (Guarantee) ಬೇಡ ಅಂತಾ ಹೇಳಿ ಬಿಡಿ ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ ಎಂದು ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಹೇಳಿದ್ದಾರೆ.
ಕೊಪ್ಪಳದ (Koppal) ಕುಕನೂರ ತಾಲೂಕಿನ ರಾಯವಣಕಿ ಗ್ರಾಮದ ಶಾಲಾ ಕೊಠಡಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಈ ವೇಳೆ, ನಮಗೆ ಗ್ಯಾರಂಟಿ ಬೇಡ ಎಂದು ಹೇಳಿ. ನಮ್ಮ ಜನ ಏನೂ ಬೇಡ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ಕೊಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ
ಮಹಿಳೆಯರಿಗೆ ಗೃಹಲಕ್ಷ್ಮೀ ಕೊಡ್ತೀರಿ. ನಮಗೆ ರಸ್ತೆ ಕೊಡಿ ಎಂದು ಕೇಳಿದ ಜನರಿಗೆ ಅವರು ಈ ರೀತಿ ಉತ್ತರಿಸಿದ್ದಾರೆ. ಗ್ರಾಮೀಣ ರಸ್ತೆ ಮಾಡಸೋದು ಕಷ್ಟ. ನಮ್ಮ ಬಳಿ ಇರುವ ಹಣದಲ್ಲಿ ನೋಡಿ ಮಾಡಬೇಕು ಎಂದಿದ್ದಾರೆ.
1.24 ಲಕ್ಷ ಕೋಟಿ ರೂ. ವಿವಿಧ ಉಚಿತ ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳಿಂದ ನೇರವಾಗಿ 54 ಕೋಟಿ ರೂ.ನೀಡುತ್ತಿದ್ದೇವೆ. ಬರುವ ದಿನಗಳಲ್ಲಿ ರಸ್ತೆಗಳಿಗೂ ಹಣ ನೀಡುತ್ತೇವೆ, ಹಳ್ಳಿ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು