ಧಾರವಾಡ: ಧಾರವಾಡ ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮೇಲೆ ಈಗಾಗಲೇ ದೂರು ದಾಖಲಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಹರಿಹರ ರಾಜನಳ್ಳಿ ವಾಲ್ಮೀಕಿ ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಹೊರಟ್ಟಿ ಅವರು ತಮ್ಮ ರಾಜಕೀಯ ಪ್ರಭಾವ ಬೀರಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ವರ್ಗಾವಣೆ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆ. ಹೀಗಿರುವಾಗ ನಾನು ಎಲ್ಲಾ ತನಿಖೆಗೂ ಸಿದ್ಧ ಎಂದು ಹೇಳಿರುವ ಹೊರಟ್ಟಿ ಅವರು ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಅವರು ಸಭಾಪತಿ ಆಗಿರುವುದರಿಂದ ಅವರಿಗೆ ಯಾವುದೇ ಸಮನ್ಸ್ ನೀಡಲು ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ
ಎಲ್ಲರೂ ಕುಳಿತು ಸಮಸ್ಯೆ ಬಗೆಹರಿಸುವ ಸಂಬಂಧ ನಾನೂ ಭಕ್ತರ ಜೊತೆ ಮಾತನಾಡುತ್ತೇನೆ. ಒಳ್ಳೆಯದಾಗುವುದಿದ್ದರೆ ಆಗಲಿ. ಈ ಸಮಸ್ಯೆ ಮುಂದುವರೆಸಬೇಕು ಎಂಬ ಆಸೆ ನಮಗೂ ಇಲ್ಲ. ಮುಂದೆ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಹೊರಟ್ಟಿ ಅವರು ಸರ್ವೋದಯ ಸಂಸ್ಥೆಯ ಬಗ್ಗೆ ನಾಲ್ಕು ಕೇಸ್‍ಗಳಿವೆ ಎಂದು ಹೇಳಿದ್ದಾರೆ. ಅವರು ಅವುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡಲಿ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್