ಧಾರವಾಡ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇದೇ 21 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ (BJP) ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ (Basavaraj Horatti) ಆಯ್ಕೆ ಬಹುತೇಕ ಖಚಿತವಾಗಿದೆ. ಹೊರಟ್ಟಿಯವರನ್ನು ಅಭ್ಯರ್ಥಿ ಎಂದು ಇಂದು ಸಂಜೆಯೇ ಅಂತಿಮವಾಗಿ ಬಿಜೆಪಿ ಘೋಷಿಸುವ ಸಾಧ್ಯತೆ ಇದೆ.
Advertisement
ಚುನಾವಣೆಯಲ್ಲಿ (Election) ಹೊರಟ್ಟಿ ಅವರು ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಇಂದು ಸಂಜೆ ಅವರ ಹೆಸರನ್ನು ಅಂತಿಮ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಮತ್ತೆ ಮುನ್ನೆಲೆಗೆ ಬಂದ ‘ಹಿಂದೂ’ ವರ್ಡ್ ವಾರ್
Advertisement
ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ ಅವರು, ಇಂದು ಬೆಳಿಗ್ಗೆ ರವಿಕುಮಾರ್ ಅವರು ನನಗೆ ದೂರವಾಣಿ ಕರೆ ಮಾಡಿ ನೀವು ಅಭ್ಯರ್ಥಿಗಳಾಗಿದ್ದೀರಿ, ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಅಂದಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಹನಿಮೂನ್‌ನಿಂದ ಬರುವಾಗ ಟೆಕ್ಕಿ ದಂಪತಿಗೆ ಅಪಘಾತ – ಪತಿಯನ್ನು ಕಳೆದುಕೊಂಡ ನವವಿವಾಹಿತೆ
Advertisement
Advertisement
ಬೆಳಗಾವಿಯಲ್ಲಿ (Belagavi) ಅಧಿವೇಶನ ನಡೆಯುವಾಗ, ಅಧಿವೇಶನದಲ್ಲಿ ಧರಣಿ ಮಾಡೋದು ಬೇಡ ಎಂದು ನಾನು ಪ್ರತಿ ಬಾರಿಯೂ ಹೇಳುತ್ತಾ ಬಂದಿದ್ದೇನೆ. ನಾನು ಸಭಾಪತಿಯಾಗಿದ್ದಾಗ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದೇ ಎರಡು ದಿನ ಮೀಸಲಿಟ್ಟಿದ್ದೆ ಎಂದು ಹೇಳಿದ್ದಾರೆ.
ಈ ಭಾಗದ ಸಮಸ್ಯೆಗಳಿಗೆ ಪ್ರತಿಫಲ ಸಿಗಬೇಕು. ನಮ್ಮದು ಸಮಗ್ರ ಕರ್ನಾಟಕ. ಈ ಬಗ್ಗೆ ಬೇರೆ ಮಾತೇ ಇಲ್ಲ. ಆದರೆ ಪ್ರಮುಖವಾಗಿ ಉತ್ತರ ಕರ್ನಾಟಕ (Uttar Karnataka) ಭಾಗದ ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಸರ್ಕಾರ, ಸದಸ್ಯರು ಮುಂದಾಗಬೇಕು. ಬರುವ ಡಿ.19 ರಿಂದ 30ರ ವರೆಗೆ ನಡೆಯುವ ಸದನದಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮೀಸಲಾತಿ (Reservation) ವಿಚಾರಕ್ಕೆ ಹಲವರು ಹೋರಾಟ ಮಾಡುತ್ತಾರೆ. ಹೋರಾಟ ಮಾಡುವುದು ಅವರ ಹಕ್ಕು. ಆದರೆ ಹೋರಾಟವನ್ನು ಶಾಂತಿಯುತವಾಗಿ ಮಾಡಬೇಕು ಎಂದು ಹೊರಟ್ಟಿ ಮನವಿ ಮಾಡಿದ್ದಾರೆ.