ಧಾರವಾಡ: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗೋದೇ ಬೇಡ ಎಂದು ಅನಿಸುತ್ತಿದೆ ಎಂದು ಹೇಳಿದರು. ಹಿಂಗೆ ಇರಲಿ ಈ ಸರ್ಕಾರ, ಹಿಂಗೆ ಇನ್ನೊಂದು ಮೂರು ವರ್ಷ ಸರ್ಕಾರ ಮಾಡಿದರೆ ಒಳ್ಳೆಯದು ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಈಗ ಉಪಚುಣಾವಣೆಯಲ್ಲಿ ಶಾಸಕರಾದವರಿಗೆ ಅವರ ಅವರಲ್ಲೇ ನೆಲೆ ಇಲ್ಲದಂತೆ ಆಗಿದೆ. ಮೂಲ ಜನ, ವಲಸಿಗರು ಎಂದು ಅವರ ನಡುವೆ ಚರ್ಚೆ ನಡೆಯುತ್ತಿದೆ. ಸಂಪುಟ ವಿಸ್ತರಣೆ ಮಾಡುವುದು ಸರ್ಕಾರದ ಮುಖ್ಯ ಕರ್ತವ್ಯ. 34 ಜನ ಸಚಿವರು ಇರಬೇಕಾದಲ್ಲಿ, 11 ಜನ ಮಾತ್ರ ನಡೆಸುವುದು ಸರಿಯಲ್ಲ. ಅವರ ವೈಯಕ್ತಿಕ ವಿಚಾರ ಏನಾದರೂ ಇರಲಿ, ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಸರ್ಕಾರಕ್ಕೆ ಖಡಕ್ಕಾಗಿ ಹೇಳಿದರು.