ಹುಬ್ಬಳ್ಳಿ: ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಸಭಾಪತಿ ಬಸವರಾಜ್ ಹೊರಟ್ಟಿಗೆ ಶಾಕ್ ಆಗಿದೆ. ಜೆಡಿಎಸ್ ಬಿಟ್ಟು ಬಿಜೆಪಿಗೆ ಹೊರಟಿದ್ದ ಹೊರಟ್ಟಿಗೆ ಆರಂಭಿಕ ಆಘಾತ ಉಂಟಾಗಿದೆ.
ಹೊರಟ್ಟಿ ಅತ್ತ ಬಿಜೆಪಿ ಸೇರ್ಪಡೆ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಸ್ಫೋಟವಾಗಿದೆ. ಯಾರ ಮಾತು ನಂಬಲೇ ಬೇಡಿ ನನಗೆ ಮತ ನೀಡಿ. ಹೊರಟ್ಟಿಗೆ ಬಿಜೆಪಿಗೆ ಸೇರಲು ಯಾವ ಅರ್ಹತೆ ಇಲ್ಲ. ಅವರು ಈ ಬಾರಿ ಸೋಲಿನ ಭಯದಿಂದ ಬಿಜೆಪಿಗೆ ಬರುತ್ತಿದ್ದಾರೆ. ಇದಕ್ಕೆ ನಾನು ಸೇರಿದಂತೆ ಪಕ್ಷದ ಕಾರ್ಯಕರ್ತರ ಅಸಮಾಧಾನಯಿದೆ ಎಂದು ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಇನ್ನೂ ಚುನಾವಣೆ ಘೋಷಣೆಯಾಗದೇ ಇದ್ದರೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಕಣ ರಂಗೇರಿದೆ. ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಘೋಷಿಸಿಕೊಂಡಿದ್ದಾರೆ. ಬಿ ಫಾರ್ಮ್ ಸಿಗದೆ ಅಧಿಕೃತ ಅಭ್ಯರ್ಥಿ ನಾನೇ ಅಂತ ಕ್ಷೇತ್ರದಲ್ಲಿ ಪ್ರಚಾರ ಆರಂಭ ಮಾಡಿದ್ದಾರೆ ಎಂದು ಹೇಳಿದರು.