ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೀಣ್ಯ ನೆಲಮಂಗಲ ಫ್ಲೈ ಓವರ್ ಮತ್ತೆ ಓಪನ್ ಮಾಡುವ ವಿಚಾರವಾಗಿ ಲಘು ವಾಹನಗಳಿಗೆ ಅವಕಾಶ ನೀಡುವುದಾಗಿ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದಾರೆ.
ಟ್ವೀಟ್‍ನಲ್ಲಿ ಏನಿತ್ತು?: ನಾಳೆಯಿಂದ ಲಘು ವಾಹನ ಓಡಾಟಕ್ಕೆ ಫ್ಲೈ ಓವರ್‌ನಲ್ಲಿ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬ್ರಿಡ್ಜ್ ತಜ್ಞರು ಅಭಿಪ್ರಾಯ ಪಡೆದುಕೊಂಡು ಓಪನ್ ಮಾಡಲು ನಿರ್ಧರಿಸಿದ್ದಾರೆಂದು ಟ್ವೀಟ್ ಮಾಡಿದ್ದರು. ಆದರೆ ನಿನ್ನೆ ರಾತ್ರಿ ಹಾಕಿದ್ದ ಈ ಟ್ವೀಟ್‍ನ್ನು ಈಗ ಡಿಲೀಟ್ ಮಾಡಿದ್ದಾರೆ.
Advertisement
Advertisement
ಡಿಸೆಂಬರ್ ಕೊನೆಯ ವಾರದ ವೇಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ನೆಲಮಂಗಲ-ಗೊರಗುಂಟೆಪಾಳ್ಯ ಫ್ಲೈಓವರ್‌ನ 102-103ನೇ ಪಿಲ್ಲರ್ ನಡುವಿನ ಸ್ಲಾಬ್‍ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡುಬಂದಿತ್ತು. ಅದನ್ನು ಸರಿಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್‍ನ ಸಂಚಾರವನ್ನು ನಿರ್ಬಂಧ ಮಾಡಿತ್ತು. ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ
Advertisement
Advertisement
ಪ್ರಾರಂಭದಲ್ಲಿ ಒಂದೇ ವಾರಕ್ಕೆ ದುರಸ್ಥಿ ಕಾರ್ಯ ಮುಗಿಸುವುದಾಗಿ ಹೇಳಿದ್ದ ಅಧಿಕಾರಿಗಳು ತಿಂಗಳಾದರೂ ರಿಪೇರಿ ಕಾರ್ಯ ಮುಗಿಸಿರಲಿಲ್ಲ. ಆದರೆ ಸದ್ಯ ಈಗ ಸಂಪೂರ್ಣ ರಿಪೇರಿ ಕಾರ್ಯ ಮುಗಿದಿದ್ದು, ತಾಂತ್ರಿಕ ದೋಷ ಇದ್ದ ಪಿಲ್ಲರ್‌ಗಳಿಗೆ ಸಪೋರ್ಟಿವ್ ಲಿಂಕ್ ಅಳವಡಿಸಿದ್ದಾರೆ. ಈಗಾಗಲೇ ದೆಹಲಿಯ ಇಂಜಿನಿಯರ್‍ಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಆದರೂ ಈವರೆಗೂ ಫ್ಲೈ ಓವರ್ ಓಪನ್ ಮಾಡಿಲ್ಲ. ಇದರಿಂದಾಗಿ ಸವಾರರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಗೆಲ್ಲುತ್ತಿದ್ದ: ಹರೀಶ್ ರಾವತ್