ಬೆಂಗಳೂರು: ತಮಿಳುನಾಡು ಸಿಎಂ ಸ್ಟಾಲಿನ್ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರಹಾಕಿದರು.
Advertisement
ಮೇಕೆದಾಟು ವಿರುದ್ಧ ಪ್ರಧಾನಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ ಬರೆದದ್ದನ್ನು ವಿರೋಧಿಸಿ ಬೊಮ್ಮಾಯಿ ಮಾತನಾಡಿದರು. ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ಅಂತಿಮ ಸಭೆ ಇದೆ. ಆದರೆ ಮೇಕೆದಾಟು ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ವಿಚಾರದಲ್ಲಿ ಪ್ರಧಾನಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ. ಸ್ಟಾಲಿನ್ ಪತ್ರ ಒಕ್ಕೂಟದ ವ್ಯವಸ್ಥೆಗೆ ವಿರೋಧ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಸ್ಟಾಲಿನ್ ಪತ್ರ
Advertisement
ನಮ್ಮ ನೀರಿನ ಬಳಕೆಗೆ ಅವರ ವಿರೋಧ ಸರಿಯಲ್ಲ. ನಾವು ನಮ್ಮ ರಾಜ್ಯದಲ್ಲೇ ಮೇಕೆದಾಟು ಯೋಜನೆ ಮಾಡುತಿದ್ದೇವೆ. ಸ್ಟಾಲಿನ್ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ. ಸ್ಟಾಲಿನ್ ಪತ್ರ ಕಾನೂನು ಬಾಹಿರವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
Advertisement
Advertisement
ಮೇಕೆದಾಟು ಕುರಿತು ಹಿಂದೆಯೂ ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ಸಭೆಗಳಾಗಿವೆ. ಈಗಿನ ಸಭೆಗೆ ಯಾಕೆ ಇವರ ವಿರೋಧ? ಮೇಕೆದಾಟು ವಿಚಾರದಲ್ಲಿ ನಿರಂತರ ಕ್ಯಾತೆ ಮಾಡುತ್ತಿದ್ದಾರೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಲ್ಲಿ ಮತ್ತೆ ಕೊರೊನಾ ಸ್ಫೋಟ