ಮೈಸೂರು: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟ ಕಾರಣ ಜನರು ಅವರನ್ನು ಕೈ ಹಿಡಿಯಲಿಲ್ಲ. ಎಲ್ಲಾ ವೇಳೆ ಜನರು ಅವರ ಮಾತನ್ನು ನಂಬಲ್ಲ. ಕೆಲವರು ಅಧಿಕಾರ ಕಳೆದುಕೊಂಡಾಗ ನೀರಿನ ಹೊರಗೆ ಇದ್ದ ಮೀನಿನಂತೆ ಆಡುತ್ತಾರೆ. ವಾಮ ಮಾರ್ಗದಿಂದ ಕರ್ನಾಟಕ ಜನರ ಆಶೀರ್ವಾದ ಪಡೆಯಲು ಆಗಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಅವರೆಲ್ಲಾ ಸಿಎಂ ಆಗಿದ್ದಾಗ ಬೀಗರ ಊಟ, ಮದುವೆಗೆ ಬರ್ತಿದ್ರು, ಬೊಮ್ಮಾಯಿ ಅಭಿವೃದ್ಧಿ ಕೆಲಸಕ್ಕೆ ಬರ್ತಿದ್ದಾರೆ: ಪ್ರತಾಪ್ ಸಿಂಹ
Advertisement
Advertisement
ಪೇ ಸಿಎಂ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದುಕೊಳ್ಳುತ್ತೇನೆ. ಆದರೆ ಕೆಲವೊಮ್ಮೆ ಹೇಳಬೇಕು ಅಂದುಕೊಳ್ಳುತ್ತೇನೆ. ಎರಡು ರೀತಿಯ ವರ್ಗಗಳು ಇವೆ. ಒಂದು ಅರ್ಜುನ, ಇನ್ನೊಂದು ಕರ್ಣ. ಅರ್ಜುನನಿಗೆ ಬಾಣ ಹೂಡಲು ಹೊಗಳಬೇಕು. ಕರ್ಣನಿಗೆ ಹೊಗಳಿದ್ರೆ ಆಗಲ್ಲ. ನಿನ್ನಿಂದ ಆಗಲ್ಲ ಎಂದು ಹೇಳಿದರೆ ನಿಖರವಾಗಿ ಕರ್ಣ ಬಾಣ ಹೊಡೆಯುತ್ತಾನೆ. ನಾನು ಕರ್ಣನ ಪಂಥಿಗೆ ಸೇರಿದವನು. ನೀವು ಎಷ್ಟು ಅವಮಾನ, ಟೀಕೆ ಮಾಡ್ತೀರಾ ಮಾಡಿ. ಅದನ್ನು ನಾನು ಸವಾಲಾಗಿ ತೆಗೆದುಕೊಂಡು ಕೆಲಸ ಮಾಡುತ್ತಾನೆ. ಜನರ ವಿಶ್ವಾಸ ಗಳಿಸುತ್ತೇನೆ. ಮತ್ತೆ ರಾಜ್ಯದಲ್ಲಿ ನಾನು ಜನಪರ ಸರ್ಕಾರವನ್ನು ಸ್ಥಾಪಿಸುತ್ತೇನೆ. ಬೆಂಗಳೂರಿನಲ್ಲಿ ನಿನ್ನೆ ಯಾವ ಸ್ಥಳದಲ್ಲಿ ಇದ್ದಿರಿ, ಅದೇ ಸ್ಥಳದಲ್ಲಿ ನಿಲ್ಲಿಸುತ್ತೇವೆ ಎಂದು ವಿಪಕ್ಷಗಳಿಗೆ ಸವಾಲು ಹಾಕಿದರು.
Advertisement
ಕಳೆದ ಎರಡು ವರ್ಷ ಕೊರೊನಾ ಇದ್ದ ಕಾರಣ ದಸರಾವನ್ನು (Mysuru Dasara) ಅದ್ದೂರಿಯಾಗಿ ಮಾಡಿರಲಿಲ್ಲ. ಈ ಬಾರಿ ಪಾರಂಪರಿಕವಾಗಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ. ನಾಡಿನ ಜನರು ಮೈಸೂರಿಗೆ ಬಂದು ದಸರಾ ಕಣ್ತುಂಬಿಕೊಳ್ಳಬೇಕು. ಎಲ್ಲರೂ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದುಕೊಳ್ಳಬೇಕು. ಎಲ್ಲರೂ ಸಹ ಮೈಸೂರು ದಸರಾಗೆ ಬನ್ನಿ ಎಂದು ಆಹ್ವಾನಿಸಿದರು. ಇದನ್ನೂ ಓದಿ: ಎಸ್.ಎಂ ಕೃಷ್ಣ ಚೇತರಿಸಿಕೊಳ್ಳುತ್ತಿದ್ದು, ಗಾಬರಿ ಬೇಡ: ಬಸವರಾಜ್ ಬೊಮ್ಮಾಯಿ
Advertisement
ರಾಜಕಾರಣದಲ್ಲಿ ಎರಡು ರೀತಿ ಇದೆ. ಒಂದು ಜನರ ಒಳಿತಿಗಾಗಿ ಕೆಲಸ ಮಾಡುವುದು. ಇನ್ನೊಂದು ಕೇವಲ ಅಧಿಕಾರಕ್ಕಾಗಿ ಕೆಲಸ ಮಾಡುವುದು. ನಾವು ಮಾಡುವ ಕೆಲಸದ ಮೇಲೆ ನಮಗೆ ನಂಬಿಕೆ ಇರಬೇಕು. ಯೋಜನೆ ಬರಿ ಘೋಷಣೆಯಾಗಬಾರದು. ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ಕಾಂಗ್ರೆಸ್ (Congress), ಜೆಡಿಎಸ್‌ಗೆ (JDS) ಚಾಟಿ ಬೀಸಿದರು.