ಬೆಂಗಳೂರು: ರಾಜ್ಯದ ಜನರ ಸರ್ವೇ ಮಾಡಿಸಿ ಚುನಾವಣೆಗೆ ಬಳಸಿಕೊಂಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.
ವೋಟರ್ ಐಡಿ (Voter ID) ಮಾಹಿತಿ ಸಂಗ್ರಹ ವಿಚಾರದಲ್ಲಿ ಕಾಂಗ್ರೆಸ್ (Congress) ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ ಆರೋಪ ಹಾಸ್ಯಾಸ್ಪದ ಎಂದು ತಿರುಗೇಟು ಕೊಟ್ಟರು. ಇಂತಹ ವಿಚಾರದಲ್ಲಿ ಕಾಂಗ್ರೆಸ್ ದಿವಾಳಿ ಆಗಿದೆ ಕಿಡಿಕಾರಿದರು.
Advertisement
Advertisement
ಚುನಾವಣೆ (Election) ಆಯೋಗ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೆ. ಅನೇಕ ವರ್ಷಗಳಿಂದ ಈ ಕೆಲಸ ಆಗುತ್ತಿದೆ. ಚುನಾವಣೆ ಆಯೋಗ ಮತ್ತು ಬಿಬಿಎಂಪಿ ಸೇರಿ ಕೆಲ NGOಗೆ ವಹಿಸುತ್ತವೆ. ಆ NGOಗೆ ಬಿಬಿಎಂಪಿ (BBMP) ಕೆಲಸ ಕೊಟ್ಟಿದೆ. ಆ NGO, BLO ಅಂತ ಮಾಹಿತಿ ಕಲೆ ಹಾಕಿದೆ ಎಂದು ಆರೋಪ ಇದೆ. ಆದರೆ ಬೇರೆ ಎಲ್ಲವೂ ಊಹಾಪೋಹದಲ್ಲಿ ಮಾಹಿತಿ ಲೀಕ್ ಆಗಿದೆ ಅಂತ ಹೇಳ್ತಿದ್ದಾರೆ. ಊಹಾಪೋಹಗಳ ಮೇಲೆ ದೊಡ್ಡ ಆರೋಪ ಕಾಂಗ್ರೆಸ್ ಮಾಡಿದೆ. ಇದೊಂದು ಹಾಸ್ಯಾಸ್ಪದ. ಕಾಂಗ್ರೆಸ್‌ಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ಇಂತಹ ಆರೋಪ ಮಾಡಿದೆ ಎಂದು ಕಿಡಿಕಾರಿದರು.
Advertisement
ಈ ವಿಚಾರ ಗೊತ್ತಾದ ಮೇಲೆ ಕೂಡಲೇ ತನಿಖೆಗೆ ಬಿಬಿಎಂಪಿಗೆ ಆದೇಶ ಮಾಡಿದ್ದೇನೆ. ಯಾರು ಯಾರು ಇದರ ಹಿಂದೆ ಇದ್ದಾರೆ, ಏನ್ ಮಾಹಿತಿ ಕಲೆ ಹಾಕಿದ್ದಾರೆ. ಏನ್ ಮಿಸ್ ಯೂಸ್ ಮಾಡಿದ್ದಾರೆ ಎಂದು ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಪೊಲೀಸ್ ದೂರು ಕೊಡಲು ಹೇಳಿದ್ದೇನೆ. ದೂರು ಕೂಡಾ ಕೊಡ್ತಾರೆ. ತನಿಖೆಯೂ ಆಗುತ್ತೆ. ಇದರಲ್ಲಿ ಯಾವುದು ಮುಚ್ಚಿಡೋ ಪ್ರಶ್ನೆ ಇಲ್ಲ ಎಂದರು.
Advertisement
ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ 134 ಕೋಟಿ ಖರ್ಚು ಮಾಡಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮಾಡಿಸಿದರು. ಜಾತಿ, ಉಪ ಜಾತಿ, ಎಲ್ಲದ್ರ ಸಮೀಕ್ಷೆ ಮಾಡಿಸಿದರು. ಆದರೆ ಅದನ್ನ ಬಿಡುಗಡೆ ಮಾಡದೇ ಎಲೆಕ್ಷನ್‌ಗೆ ಉಪಯೋಗ ಮಾಡಿಕೊಂಡರು. ಇದಕ್ಕಿಂತ ದೊಡ್ಡದು ಬೇಕಾ? ಕಂಪ್ಲೇಂಟ್ ಮೇಲೆ ಕ್ರಮ ಆಗೋದಾದ್ರೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ಮೇಲೆ ಕ್ರಮ ಆಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್ ಸಿಂಹ
ನಮಗೂ NGO ಮಾಡಿದ ಕೆಲಸಕ್ಕೂ ಸಂಬಂಧ ಇಲ್ಲ. ಕೆಳ ಹಂತದಲ್ಲಿ ಅದು ಆಗಿದೆ. ತನಿಖೆ ಆಗಲಿ ಯಾರು ತಪ್ಪು ಮಾಡಿದ್ರೆ ಅವರ ಮೇಲೆ ಕ್ರಮ ಆಗುತ್ತೆ. ಈಗ ಯಾವ ಚುನಾವಣೆ ನಡೆದಿದೆ. ಅವರ ಆಡಳಿತದಲ್ಲಿ ಇಡೀ ಕರ್ನಾಟಕದ ಮಾಹಿತಿ ಪಡೆದು ಚುನಾವಣೆ ಮಾಡಿದರು. ಆ ವರದಿಯನ್ನ ತಮ್ಮಷ್ಟಕ್ಕೆ ತಾವೇ ಬಳಕೆ ಮಾಡಿದರು. ಚುನಾವಣೆಯಲ್ಲಿ ಸೋತು ಕುಳಿತಿದ್ದಾರೆ. ಹತಾಶರಾಗಿ ಇಂತಹ ಆರೋಪ ಕಾಂಗ್ರೆಸ್ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ: ಈಶ್ವರಪ್ಪ