ಹುಬ್ಬಳ್ಳಿ: ಎಂಇಎಸ್ (MES) ಪುಂಡರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ನಮಗೆ ಗೊತ್ತಿದೆ, ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಖಡಕ್ ವಾರ್ನಿಂಗ್ ನೀಡಿದರು.
ಎಂಇಎಸ್ ಮಹಾಮೇಳ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ, ಎಂಇಎಸ್ ಪುಂಡಾಟ ಇದೇ ಮೊದಲಲ್ಲ. ಕಳೆದ 50 ವರ್ಷದಿಂದ ಎಂಇಎಸ್ ಪುಂಡಾಟ ಮಾಡುತ್ತಲೇ ಬಂದಿದೆ. ಅವರನ್ನು ಯಾವ ರೀತಿ ಹದ್ದು ಬಸ್ತಿನಲ್ಲಿ ಇಡಬೇಕು ನಮಗೆ ಗೊತ್ತಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಡಿ.ಕೆ ಶಿವಕುಮಾರ್ (DK Shivakumar) ಕುಕ್ಕರ್ ಬಾಂಬ್ ವಿಚಾರ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ (Siddaramaiah) ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಮೊದಲು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನು ಗಮನಿಸಿ ಪ್ರತಿಕ್ರಿಯೆ ನೀಡಬೇಕು. ಅದೊಂದು ಆಕಸ್ಮಿಕ ಘಟನೆ, ಪ್ರೆಶರ್ ಕುಕ್ಕರ್‌ನಿಂದ ಆಗಿದ್ದು ಅಂತ ಹೇಳಿದ್ದಾರೆ. ಶಿವಕುಮಾರ್ ಹೇಳಿದ ಮಾತು ಕೇಳಿಸಿಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್ ಸರ್ಪಗಾವಲು
Advertisement
Advertisement
ಬೆಳಗಾವಿ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಕೆಲವು ಮಹತ್ವದ ಬಿಲ್ ತರುತ್ತಿದ್ದೇವೆ. ಎಸ್ಸಿ, ಎಸ್ಟಿ ಮೀಸಲಾತಿ ಜಾರಿ ಬಿಲ್ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಬೆಳಗಾವಿ ಅಧಿವೇಶನದಲ್ಲಿ ಆರ್ಡಿನೆನ್ಸ್ ರೀ ಪೇಮೆಂಟ್ ಬಿಲ್ ಬರುತ್ತದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿದ್ದು, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು