ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡ್ತೀವಿ : ಬೊಮ್ಮಾಯಿ

Public TV
2 Min Read
BASAVARAJ BOMMAI 10

ಶಿವಮೊಗ್ಗ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪುನರುಚ್ಚರಿಸಿದ್ದಾರೆ.

ಬಿಜೆಪಿಯ (BJP) ಪ್ರಮುಖ ಅಜೆಂಡಾಗಳಲ್ಲಿ ಒಂದಾದ ಏಕರೂಪ ನಾಗರಿಕ ಸಂಹಿತೆಯನ್ನು ದೇಶಾದ್ಯಂತ ಬಿಡಿಬಿಡಿಯಾಗಿ ಜಾರಿಗೆ ತರುವ ಪ್ರಯತ್ನಗಳು ಆರಂಭವಾದಂತೆ ಕಾಣುತ್ತಿದೆ. ಇತ್ತೀಚಿಗೆ ಮುಗಿದ ಹಿಮಾಚಲ ಪ್ರದೇಶ ಚುನಾವಣೆ ವೇಳೆಯೂ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿ ರಚಿಸಿತ್ತು. ಇದೀಗ ಕರ್ನಾಟಕದಲ್ಲಿಯೂ ಬಿಜೆಪಿ, ಏಕರೂಪ ನಾಗರಿಕ ಸಂಹಿತೆ ಜಾರಿಯ ಜಪ ಶುರು ಮಾಡಿಕೊಂಡಿದೆ.

BJP

ಶಿವಮೊಗ್ಗದಲ್ಲಿ ನಿನ್ನೆಯಷ್ಟೇ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸುಳಿವು ನೀಡಿದ್ದ ಸಿಎಂ, ಇವತ್ತು ಕೂಡ ಅದೇ ಜಪ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

ಎಲೆಕ್ಷನ್ ಸಮೀಪಿಸಿದಂತೆ ಇದಕ್ಕೆ ಮತ್ತಷ್ಟು ಸ್ಪಷ್ಟರೂಪ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸುವ ಬಗ್ಗೆ ಕಾಂಗ್ರೆಸ್‍ನಲ್ಲಿ ಚರ್ಚೆಗಳು ನಡೆದಿವೆ. ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಬಿಜೆಪಿಯವರು, ಏಕರೂಪ ನಾಗರಿಕ ಸಂಹಿತೆ ಹೆಸರಲ್ಲಿ ಈಗ ಸಂವಿಧಾನ ತಿರುಚಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ

ಏನಿದು ಏಕರೂಪ ನಾಗರಿಕ ಸಂಹಿತೆ?: ವಿವಾಹ, ಉತ್ತರಾಧಿಕಾರಕ್ಕೆ ಸಂಬಂಧಿಸಿ ಧರ್ಮಾತೀತವಾಗಿ ಎಲ್ಲರಿಗೂ ಒಂದೇ ಕಾನೂನು. ಸಂವಿಧಾನದ ನಾಲ್ಕನೇ ಭಾಗದಲ್ಲಿ ಬರುವ 44ನೇ ವಿಧಿಯಲ್ಲಿ ಈ ಬಗ್ಗೆ ವಿವರಗಳಿವೆ. ದೇಶದ ಎಲ್ಲರಿಗೂ ಅನ್ವಯವಾಗುವಂತೆ ಒಂದೇ ಕಾನೂನನ್ನು ರಾಜ್ಯಗಳು ಜಾರಿಗೆ ತರಬೇಕು ಎಂದು ಇದರಲ್ಲಿ ವಿವರಗಳಿವೆ. ಆದರೆ ಎಲ್ಲರಿಗೂ ಒಂದೇ ಕಾನೂನು ಜಾರಿ ಕಡ್ಡಾಯವಲ್ಲ ಎಂದು 44ನೇ ವಿಧಿ ರಾಜ್ಯ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿದೆ. ರಾಜ್ಯ ನೀತಿ ನಿರ್ದೇಶಕ ತತ್ವಗಳ ಪಾಲನೆ ಕಡ್ಡಾಯವಲ್ಲ ಎಂದು ಸಂವಿಧಾನದ 37ನೇ ವಿಧಿಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒಲವು ತೋರುತ್ತಿದೆ. ಇದನ್ನೂ ಓದಿ: ಮೋದಿಯಿಂದ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ: ಬಿಎಸ್‍ವೈ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *