ಚಿಕ್ಕಬಳ್ಳಾಪುರ: ಅತ್ಯಾಚಾರ, ಲ್ಯಾಂಡ್ ಮಾಫಿಯಾ ಸೇರಿದಂತೆ ಎಲ್ಲಾ ಮಾಫಿಯಾಗಳನ್ನು ರಾಜ್ಯದಲ್ಲಿ ಬಗ್ಗು ಬಡಿಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರ್ಕಾರ ಯಾರ ಮುಲಾಜಿನಲ್ಲಿ ಇಲ್ಲ. ಆದರೆ ಹಿಂದಿನ ಸರ್ಕಾರಗಳು ಮೈನ್ಸ್, ಎಕ್ಸೈಸ್, ಕಂಟ್ರಾಕ್ಟ್ಸ್, ಹಾಗೂ ಎಜುಕೇಷನಲ್ ಕ್ಯಾಪಿಟಲ್ಸ್‌ನ ಮುಲಾಜಿನಲ್ಲಿದ್ದವು. ಆದರೆ ಆ ಸರ್ಕಾರದವರು ತಾವು ಬಡವರ ಪರ ಅಂತ ಬರೀ ಭಾಷಣ ಬಿಗುತ್ತಿದ್ದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ಭಾಷಣವನ್ನು ಅನುಕರಣೆ ಮಾಡಿ ವ್ಯಂಗ್ಯ ಮಾಡಿದರು.
Advertisement
Advertisement
ಈಗ ಕಾಲ ಬದಲಾಗಿದೆ ಜನರ ಜಾಗೃತರಾಗಿದ್ದಾರೆ. ನಮ್ಮ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಜನ ಬೆಂಬಲಿಸುತ್ತಾರೆ ಒಳ್ಳೆಯ ಕೆಲಸಗಳಿಗೆ ಜನ ಮುದ್ರೆ ಹಾಕಿ ಆರ್ಶೀವಾದ ಮಾಡಲಿದ್ದಾರೆ ಎಂದು ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿ ಸರ್ಕಾರ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಜನರ ಉದ್ದಾರ ಮಾಡುತ್ತೇವೆ ಅಂತ ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ: ಬೊಮ್ಮಾಯಿ
Advertisement
ಕಂದಾಯ ಇಲಾಖೆಯ ಅದ್ಬುತವಾದ ಕಾರ್ಯಕ್ರಮ ಇದಾಗಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ವಿನೂತನ ಕಾರ್ಯಕ್ರಮ ಮಾಡುತ್ತಿದ್ದೇವೆ. ಮನೆ ಮನೆಗೆ ಕಂದಾಯ ದಾಖಲೆಗಳು ಎಂಬ ಕಾರ್ಯಕ್ರಮ ಇದಾಗಿದೆ. ಸರ್ಕಾರ ಜನರ ಪಾಲಿಗೆ ಜೀವಂತವಾಗಿದೆಯಾ ಇಲ್ಲವಾ ಎಂಬುದು, ಜನರಿಗೆ ಸಂಕಷ್ಟ ಬಂದಾಗ ಅರ್ಥವಾಗುತ್ತದೆ ಎಂದು ತಿಳಿಸಿದರು.
Advertisement
ಸ್ವಾತಂತ್ರ್ಯ ಬಂದು 70ವರ್ಷ ಆಯಿತು. ಹಿಂದಿನ ಸರ್ಕಾರ ರೈತರು ದೀನ ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಅವರು ಅವರ ಹೆಸರಿನ ಮೇಲೆ ಮತ ಪಡೆಯುವ ರಾಜಕಾರಣ ನಡೆದಿದೆ. ಬಡವರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿದರು. ಜನರ ಉದ್ಧಾರ ಮಾಡುತ್ತೇವೆ ಎಂದು ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಂದಾಯ ದಾಖಲೆ ಮನೆ ಬಾಗಿಲಿಗೆ- ಯೋಜನೆಗೆ ಸಿಎಂ ಚಾಲನೆ