ಶಿವಮೊಗ್ಗ: ಅಡಿಕೆಗೆ ಎಲೆಚುಕ್ಕಿ ರೋಗ ಹಿನ್ನೆಲೆಯಲ್ಲಿ ಅಡಿಕೆ (Areca) ತೋಟಗಳ ಸಮಗ್ರ ನಿರ್ವಹಣೆ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಸರ್ಕಾರ ಏನು ಕ್ರಮ ಕೈಗೊಳ್ಳಬಹುದೆಂದು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೈಮರ ಗ್ರಾಮಕ್ಕೆ ಭೇಟಿ ನೀಡಿ ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಪರಿಶೀಲನೆ ನಡೆಸಿದ ಅವರು, ಕೃಷಿ ವಿಜ್ಞಾನಿಗಳು ಹಾಗು ಕೃಷಿ ಅಧಿಕಾರಿಗಳಿಂದ ರೋಗದ ಬಗ್ಗೆ ಮಾಹಿತಿ ಪಡೆದರು. ಇದನ್ನೂ ಓದಿ: ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ – ಸಿಎಂ
Advertisement
Advertisement
ಪರಿಶೀಲನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, 42 ಸಾವಿರ ಹೆಕ್ಟೇರ್ ಅಡಿಕೆ ತೋಟ ಎಲೆಚುಕ್ಕೆ ರೋಗಕ್ಕೆ ಭಾದೆಯಾಗಿದೆ. ಸಮಗ್ರ ನಿರ್ವಹಣೆಯ ವರದಿ ಬಂದ ನಂತರ ಪರಿಹಾರ ನೀಡಲಾಗುವುದು. ಅಡಿಕೆ ರೋಗದ ವಿರುದ್ಧ ಹೋರಾಡಲು ಬೆಳೆಗಾರರ ಜೊತೆ ಸರ್ಕಾರ ಇದೆ. ಯಾರು ಆತಂಕಪಡುವ ಅಗತ್ಯ ಇಲ್ಲ ಎಂದರು. ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ವಿವಿಧ ಸಮಿತಿಗಳು ಪ್ರಕಟ