Advertisements

ಮೌಖಿಕವಾಗಿ ಕಾಮಗಾರಿಗೆ ಆದೇಶ ನೀಡಿದರೆ ಅಧಿಕಾರಿಗಳು, ಇಂಜಿನಿಯರ್‌ ಹೊಣೆ: ಬೊಮ್ಮಾಯಿ

ಶಿವಮೊಗ್ಗ: ಮೌಖಿಕವಾಗಿ ಯಾವುದೇ ಕಾಮಗಾರಿಗೆ ಆದೇಶ ನೀಡಬಾರದು. ಒಂದು ವೇಳೆ ಆದೇಶ ನೀಡಿದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisements

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಆಡಳಿತ ಹಾಗೂ ಪಂಚಾಯತ್ ರಾಜ್‍ನಲ್ಲಿ ಮೌಖಿಕವಾಗಿ ಕಾಮಗಾರಿ ನಡೆಯುತ್ತವೆ ಎಂಬ ಆರೋಪ ಇದೆ. ಇದರಿಂದಾಗಿ ಮೌಖಿಕವಾಗಿ ಯಾವುದೇ ಕಾಮಗಾರಿಗೆ ಆದೇಶ ನೀಡಬಾರದು. ಒಂದು ವೇಳೆ  ಆದೇಶ ನೀಡಿದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

Advertisements

ಕಾಮಗಾರಿಯಲ್ಲಿ ಪರ್ಸೆಂಟೆಜ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ಪಾರದರ್ಶಕವಾಗಿ ಕಾಮಗಾರಿ ನಡೆಸುವ ಸಲುವಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ. ಕಮಿಷನ್ ಪ್ರಕ್ರಿಯೆ ಎಸ್ಟಿಮೆಟ್ಸ್‌ ಮಾಡುವುದರಿಂದಲೇ ಪ್ರಾರಂಭವಾಗುತ್ತದೆ. ಹೀಗಾಗಿಯೇ ಟೆಂಡರ್ ನಿಯಮಗಳು ಕೆಲವೇ ಕೆಲವರಿಗೆ ಬೇಕಾದ ಹಾಗೆ ಆಗುತ್ತದೆ ಎಂಬ ದೂರಿದೆ. ಇದಕ್ಕಾಗಿ ಒಂದು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ: ಟಿಬಿ ಜಯಚಂದ್ರ

ಸಮಿತಿಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಹಣಕಾಸು ಪರಿಣಿತರು ಹಾಗೂ ಆ ಇಲಾಖೆಯ ತಾಂತ್ರಿಕ ಪರಿಣತಿ ಪಡೆದವರು ಇರುತ್ತಾರೆ. 50 ಕೋಟಿ ಮೇಲಿನ ಕಾಮಗಾರಿಯು ಕಮಿಟಿ ಮುಂದೆ ಹೋಗುತ್ತದೆ. ಎಸ್ಟಿಮೆಟ್‌ ಎಸ್.ಆರ್. ರೇಟ್ ಪ್ರಕಾರ ಇದೆಯೋ, ಇಲ್ಲವೋ, ಅದರಲ್ಲಿ ಏನಾದರು ಪ್ಯಾಡಿಂಗ್ ಮಾಡಿದ್ದಾರಾ. ಎರಡನೇಯದಾಗಿ ಟೆಂಡರ್ ಕೆಟಿಟಿಪಿ ಕಾಯ್ದೆ ಪ್ರಕಾರ ಇದೆಯೋ, ಇಲ್ಲವೋ ಎಲ್ಲವನ್ನು ಗಮನಿಸಿ ಅನುಮೋದನೆ ನೀಡಿದ ಮೇಲೆಯೇ ಟೆಂಡರ್ ಮಾಡಬೇಕು ಎನ್ನುವಂತಹ ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದ್ದೇವೆ ಎಂದರು. ಇದನ್ನೂ ಓದಿ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್

Advertisements

ಈಗಾಗಲೇ ಸಮಿತಿಗೆ ಜೀವ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಮಿಟಿ ಕೆಲಸ ಪ್ರಾರಂಭವಾಗುತ್ತದೆ. ಸರಳವಾಗಿ ಅವರ ಇಲಾಖೆಯಲ್ಲಿಯೇ ಮಾಡುವಂತಿಲ್ಲ. ಎಲ್ಲಾ ಇಲಾಖೆಯ 50 ಕೋಟಿ ರೂ. ಕಾಮಗಾರಿಯನ್ನು ಕಮಿಟಿ ತೀರ್ಮಾನ ಮಾಡುತ್ತದೆ. ಇನ್ನೂಂದು ವಾರದಲ್ಲಿ ಸಮಿತಿ ರಚನೆ ಆಗುತ್ತದೆ. ಸಮಿತಿಗೆ ಕಾಲಾವಧಿ ಒಳಗೆ ಟೆಂಡರ್‌ಗೆ ಅನುಮತಿ ನೀಡುತ್ತದೆ. ಅದು 15 ದಿನಗಳ ಒಳಗೆ ಅನುಮೋದನೆ ನೀಡಬೇಕು. ಸಂಖ್ಯೆ ಜಾಸ್ತಿಯಾದರೆ ಇನ್ನೂಂದು ಕಮಿಟಿ ರಚನೆ ಆಗುತ್ತದೆ ಎಂದು ಭರವಸೆ ನೀಡಿದರು.

Advertisements
Exit mobile version