ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನವಾಗಿದೆ. ಲಿಂಗಾಯತರಿಗೆ 2D ಮೀಸಲಾತಿ, ಒಕ್ಕಲಿಗರಿಗೆ 2C ಮೀಸಲಾತಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಮುಸ್ಲಿಮರಿಗೆ 2B ಮೀಸಲಾತಿ ರದ್ದುಗೊಳಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲೇ ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದ್ರೆ, ಈ ಬಗ್ಗೆ ತೀರ್ಮಾನ ಹೊರಬೀಳಬೇಕಿದೆ.
ಬಹುಕಾಲದಿಂದ ಸಮುದಾಯಗಳ ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಳವನ್ನು ನಮ್ಮ ಸರ್ಕಾರ ಈಡೇರಿಸಿದೆ. ಒಕ್ಕಲಿಗ, ವೀರಶೈವ ಮತ್ತು ಒಳಪಂಗಡಗಳು ಸೇರಿದಂತೆ ಪ್ರವರ್ಗ 2C ಹಾಗೂ 2Dಯಲ್ಲಿ ಬರುವ ಸಮುದಾಯಗಳಿಗೆ ಶೇ.6 ಹಾಗೂ ಶೇ.7ಕ್ಕೆ ಮೀಸಲಾತಿಯನ್ನು ಏರಿಸಿ ಸಾಮಾಜಿಕ ನ್ಯಾಯದ ಬದ್ಧತೆ ಮೆರೆದಿದೆ.#BJPYeBharavase
1/2 pic.twitter.com/CSTEtsfmNz
— BJP Karnataka (@BJP4Karnataka) March 24, 2023
ಮೀಸಲಾತಿ ಗಿಫ್ಟ್ – ಸರ್ಕಾರದ ನಿರ್ಣಯಗಳೇನು?
ಲಿಂಗಾಯತ ಸಮುದಾಯಕ್ಕೆ ಶೇ.2 ಹೆಚ್ಚುವರಿ ಮೀಸಲಾತಿ ಕಲ್ಪಿಸುವ ನಿರ್ಣಯ ಕೈಗೊಂಡಿದೆ. 2D ಪ್ರವರ್ಗದಲ್ಲಿ ಲಿಂಗಾಯತರಿಗೆ ಇದ್ದ ಶೇ.5ರಷ್ಟು ಇದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಶೇ.2 ಹೆಚ್ಚುವರಿ ಮೀಸಲಾತಿ ಕಲ್ಪಿಸಲಾಗಿದೆ. ಈ ಮೂಲಕ 2C ಪ್ರವರ್ಗದಲ್ಲಿ ಒಕ್ಕಲಿಗರಿಗೆ ಶೇ.4ರಷ್ಟು ಇದ್ದ ಮೀಸಲಾತಿಯನ್ನು ಶೇ.6ಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಲಿಂಗಾಯತರಿಗೆ ಶೇ.7, ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ – SC ಒಳ ಮೀಸಲಾತಿಗೆ ಸಂಪುಟ ಅಸ್ತು
ಮುಸ್ಲಿಮರಿಗೆ ಇದ್ದ ಪ್ರತ್ಯೇಕ 2B ಮೀಸಲಾತಿ ರದ್ದುಗೊಳಿಸಲಾಗಿದೆ. EWS (ಆರ್ಥಿಕ ದುರ್ಬಲ ವರ್ಗ) ಕೋಟಾ ವ್ಯಾಪ್ತಿಗೆ ಮುಸ್ಲಿಮರನ್ನು ಸೇರಿಸಿದ್ದು, ಅದೇ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಾಡು ಕುರುಬ, ಗೊಂಡ ಕುರುಬರನ್ನ ಎಸ್‌ಟಿಗೆ ಸೇರಿಸಿ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರಕ್ಕೆ ಭೇಟಿ ಕೊಟ್ರೆ ಅಧಿಕಾರ ಹೋಗುತ್ತೆ – ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ, ಬೊಮ್ಮಾಯಿ