ಬೆಂಗಳೂರು: ಸಿದ್ದೇಶ್ವರ ಸ್ವಾಮೀಜಿಗಳನ್ನು (Siddeshwar Swamiji) ನಿನ್ನೆಯೇ ಅವರನ್ನು ಭೇಟಿ ಮಾಡಿದ್ದೆ, ಅವರು ನನ್ನನ್ನು ಗುರುತು ಹಿಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಸುದ್ದಿಗಾರರೊದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಅವರನ್ನು ನಿನ್ನೆ ಭೇಟಿ ಮಾಡಿದ್ದೇನೆ. ಯಾವುದೇ ಆತಂಕ ಬೇಡ. ಸ್ವಾಮೀಜಿಗಳು ತಮ್ಮ ಅಂತರ್ ಗತ ಶಕ್ತಿಯಿಂದ ಆರೋಗ್ಯ ಸುಧಾರಿಸಿ ಬರಲಿದ್ದಾರೆ ಎಂದು ತಿಳಿಸಿದರು.
ವೈಕುಂಠ ಏಕಾದಶಿ ನಿಮಿತ್ತ ಟಿಟಿಡಿ ವೆಂಕಟೇಶ್ವರ ದರ್ಶನ ಪಡೆದಿದ್ದು, ಪುನೀತ ಭಾವನೆ ಬಂದಿದೆ. ರಾಜ್ಯದ ಸಮಸ್ತ ಜನತೆಗೆ ಒಳಿತಾಗಲೀ ಎಂದು ಬೇಡಿಕೆ ಇಟ್ಟಿರುವೆ. ರಾಜ್ಯ ಅಭಿವೃದ್ಧಿ ಸಮೃದ್ಧಿ ಕಾಣಲಿ ಎಂದು ಬೇಡಿಕೆ ಇಟ್ಟಿದ್ದೇನೆ. ಚುನಾವಣೆಯ ಬಗ್ಗೆ ನಾನು ದೇವರ ಹತ್ತಿರ ಈ ಥರ ಎಲ್ಲಾ ಬೇಡಿಕೊಳ್ಳುವುದಿಲ್ಲ. ದೇವರಿಗೆ ಗೊತ್ತಿದೆ, ಮತದಾರರೇ ದೇವರು. ನನಗೆ ವಿಶ್ವಾಸ ಇದೆ, ಮತ್ತೊಮ್ಮೆ ಬಿಜೆಪಿ (BJP) ಸರ್ಕಾರ ಬರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ
ಅರವಿಂದ್ ಲಿಂಬಾವಳಿ ಹೆಸರಿಟ್ಟು ಉದ್ಯಮಿ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಲಿಂಬಾವಳಿ ಹೆಸರು ಬಂದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಚಾರ ಇನ್ನೂ ನನಗೆ ಗೊತ್ತಿಲ್ಲ, ಮಾಹಿತಿ ಪಡೆಯುವೆ. ಕಾನೂನಾತ್ಮಕವಾಗಿ ಏನೆಲ್ಲಾ ನಡೆಯಬೇಕೋ ನಡೆಯಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು