ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಶಿಖಾರಿಪುರದಲ್ಲಿ ಸ್ಪರ್ಧಿಸುವುದರ ಬಗ್ಗೆ ಯಡಿಯೂರಪ್ಪನವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ. ಕ್ಷೇತ್ರದ ಜನ ಪದೆ ಪದೇ ಹೇಳುತ್ತಿದ್ದರು. ಹಾಗಾಗಿ ಯಡಿಯೂರಪ್ಪನವರು ನಿನ್ನೆ ಆ ಹೇಳಿಕೆ ನೀಡಿದ್ದಾರೆ ಎಂದರು.
Advertisement
ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಬಿಜೆಪಿ ಟಿಕೇಟ್ ಬಗ್ಗೆ ಮೋದಿ, ಅಮಿತ್ ಶಾ ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪ ಅಂದರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಗಳಿಂದ ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ ಎಂದು ಹೇಳಿದರು.
Advertisement
Advertisement
ಬಿಎಸ್‍ವೈ ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ, ಈಗ ಸೃಷ್ಟಿ ಮಾಡ್ತಾರಾ? ಯಡಿಯೂರಪ್ಪರು ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳ್ತಾರೆ. ಆ ಕ್ಷಣ ಕ್ಷೇತ್ರದ ಜನರ ಒತ್ತಾಯಕ್ಕೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ, ಅದು ಸಲಹೆ ಅಷ್ಟೇ. ಅಂತಿಮವಾಗಿ ವರಿಷ್ಟರು ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.
Advertisement
ನನಗೆ ರಿಟೈರ್ಡ್ ಅನ್ನೋದೇ ಇಲ್ಲ. ನಾಳೆಯಿಂದ ಕಾರ್ಯಕ್ರಮಗಳಿಗೆ ಬರ್ತೀನಿ ಎಂದು ಬಿಎಸ್‍ವೈ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಭಾರತಕ್ಕೆ ಶ್ರೀಕೃಷ್ಣನ ರೂಪದಲ್ಲಿ ಮೋದಿ ಬಂದಿದ್ದಾರೆ: ಈಶ್ವರಪ್ಪ
ಕಾಂಗ್ರೆಸ್ಸೇ ಅಯೋಮಯ ಆಗಿದೆ. ಕಾಂಗ್ರೆಸ್‍ನವರು ಮೊದಲು ಜಾತಿವಾರು ಮತಗಳನ್ನು ಕೇಳುವುದು ಬಿಡಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗೋವಾದಲ್ಲಿ ಪುತ್ರಿಯ ಅಕ್ರಮ ಬಾರ್- ಸ್ಮೃತಿ ಇರಾನಿಯನ್ನು ವಜಾಗೊಳಿಸುವಂತೆ ಮೋದಿಗೆ ಒತ್ತಾಯ