ಬೆಂಗಳೂರು: ಒಂದೂವರೆ ತಿಂಗಳಲ್ಲಿ ಎರಡನೇ ಪಟಾಕಿ ದುರಂತ ನಡೆದಿದೆ. ಹೀಗಾಗಿ ಹಾವೇರಿ (Haveri) ಮತ್ತು ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಒತ್ತಾಯಿಸಿದರು.
ಅತ್ತಿಬೆಲೆ ಪಟಾಕಿ ದುರಂತ (Fire Accident Attibele) ಪ್ರಕರಣ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ತಿಬೆಲೆ ಪಟಾಕಿ ದುರಂತ ಬಹಳ ದೊಡ್ಡ ಘೋರ. 14 ಜನ ಮೃತಪಟ್ಟಿದ್ದಾರೆ, ಇದು ಆಘಾತಕಾರಿ ವಿಚಾರವಾಗಿದೆ. ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
Advertisement
Advertisement
ಗಾಯಾಳುಗಳಿಗೆ ಸರ್ಕಾರ ಉತ್ತಮ ಚಿಕಿತ್ಸೆ ಕೊಡಿಸಲಿ. ಹಾವೇರಿಯಲ್ಲೂ ಪಟಾಕಿ ದುರಂತ ಆಗಿತ್ತು. ಕಾನೂನಿನಲ್ಲಿ ಪಟಾಕಿಗಳ ಇಷ್ಟೊಂದು ಪ್ರಮಾಣದ ಶೇಖರಣೆಗೆ ಅವಕಾಶ ಇಲ್ಲ. ಕಾನೂನು ಉಲ್ಲಂಘಿಸಿ ಪಟಾಕಿ ಶೇಖರಣೆ ಮಾಡಿಕೊಳ್ಳಲು ಗೋಡೌನ್ ಗೆ ಅಧಿಕಾರಿಗಳ ಅನುಮತಿ ಕೊಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲಿ ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ
Advertisement
ಈ ಮೊದಲು ಹಾವೇರಿಯಲ್ಲಿ ದುರಂತ ನಡೆದು ನಾಲ್ಕು ಜನ ಮೃತಪಟ್ಟಿದ್ರು. ಈಗ ಅತ್ತಿಬೆಲೆಯಲ್ಲಿ 14 ಜನ ಮೃತಪಟ್ಟಿದ್ದಾರೆ. ಅಂದ್ರೆ ನಿಯಮಗಳ ಪಾಲನೆ ಆಗ್ತಿಲ್ಲ ಅಂತ ಇದರಿಂದ ಗೊತ್ತಾಗುತ್ತೆ. ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ. ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಇಂತಹ ಘಟನೆಗಳು ನಿಲ್ಲುತ್ತವೆ ಎಂದು ಹೇಳಿದರು.
Advertisement
ಅತ್ತಿಬೆಲೆ ಪಟಾಕಿ ದುರಂತಕ್ಕೆ ಸ್ಥಳೀಯ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ. ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸೆನ್ಸ್ ಕೊಡೋದು, ಅಕ್ರಮ ಶೇಖರಣೆಗೆ ಅವಕಾಶ ಮಾಡಿಕೊಟ್ಟಿದ್ರಿಂದ ಇಷ್ಟು ದೊಡ್ಡ ದುರಂತ ಆಗಿದೆ. ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಇಷ್ಟು ದೊಡ್ಡ ದುರಂತ ಆಗಿದ್ದು, ಸರ್ಕಾರ ಕಣ್ತೆರಯದಿದ್ದರೆ ಇನ್ನಷ್ಟು ದುರಂತಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಬಿಜೆಪಿ ನಾಯಕರ ಪ್ರವಾಸ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧ್ಯಕ್ಷರು, ನಾವು ಎಲ್ಲ ಕೂತು ಚರ್ಚೆ ಮಾಡ್ತೇವೆ. ಎಲ್ಲರೂ ಚರ್ಚಿಸಿ ಪ್ರವಾಸದ ರೂಪುರೇಷೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದರು.
ರಾಜರಾಜೇಶ್ವರಿ ವಲಯದ ಒಂಭತ್ತು ವಾರ್ಡ್ ಗಳಿಗೆ ಅನುದಾನ ಕೊಡದ ಸರ್ಕಾರದ ನಡೆಗೆ ಮಾಜಿ ಸಿಎಂ ಖಂಡನೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಾವು ಭೇದಭಾವ ಮಾಡಿರಲಿಲ್ಲ. ಸೀನಿಯಾರಿಟಿ ಮೇಲೆ ಅನುದಾನ ಕೊಟ್ಟಿದ್ವಿ. ಈಗ ಸಿನಿಯಾರಿಟಿ ಇಲ್ಲ. ಈಗಾಗಲೇ ಪಾಲಿಕೆ ವಾರ್ಡ್ ಗಳಿಗೆ ಅನುದಾನ ಕೊಡದೇ ನಿಲ್ಲಿಸಿದ್ದಾರೆ. ಈಗ ಅದರ ಮೇಲೆ ತಾರತಮ್ಯ ಮಾಡುತ್ತಿದ್ದಾರೆ. ತಾರತಮ್ಯ ಮಾಡದೇ ಸರ್ಕಾರ ಕೂಡಲೇ ಅನುದಾನ ಕೊಡಲಿ. ಬೇರೆ ವಾರ್ಡ್ ಗಳಿಗೆ ಅನುದಾನ ಕೊಟ್ಟು ರಾಜರಾಜೇಶ್ವರಿ ವಲಯಕ್ಕೆ ಕೊಟ್ಟಿಲ್ಲ ಅಂದ್ರೆ ಅದು ರಾಜಕೀಯವೇ ಎಂದು ಕಿಡಿಕಾರಿದರು.
Web Stories