ಬೆಂಗಳೂರು: ಅಪ್ಪು ನೀವು ಫಾರ್ಮಲ್ ಎಜುಕೇಶನ್ ಬಗ್ಗೆ ಕಲಿಯಲಿಲ್ಲ ಅಂದರೂ ಪರವಾಗಿಲ್ಲ. ಫಾರ್ಮಲ್ ಎಜುಕೇಶನ್ ಮುಖ್ಯವಲ್ಲ. ಜ್ಞಾನ ಬಹಳ ಮುಖ್ಯ. ಜ್ಞಾನದಿಂದಲೇ ವಿದ್ಯೆ. ನೀವೊಬ್ಬರು ಐಕಾನ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ಅವರನ್ನು ಹೊಗಳಿದ್ದಾರೆ.
Advertisement
ನಗರದ ಖಾಸಗಿ ಹೋಟೆಲ್‍ನಲ್ಲಿ ಡಾ ರಾಜ್ ಕುಮಾರ್ ಅಕಾಡೆಮಿಯಿಂದ ಡಾ. ರಾಜ್‍ಕುಮಾರ್ ಲರ್ನಿಂಗ್ ಆಪ್‍ನನ್ನು ಲೋಕಾರ್ಪಣೆ ಮಾಡಿ ಬಸವರಾಜ್ ಬೊಮ್ಮಾಯಿ ಮಾತನಾಡಿದರು.
Advertisement
Advertisement
ಪುನೀತ್ ರಾಜ್‌ಕುಮಾರ್‌ರವರು ಈ ಆ್ಯಪ್‍ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಿನ್ನ ರೆಕ್ಕೆ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಮಾನಸ ಸರೋವರದಲ್ಲಿ ನಿಮ್ಮ ಪರಮಹಂಸಕ್ಕೆ, ನಿಮ್ಮ ಆ್ಯಪ್‍ಗೆ ನಮ್ಮ ಅಪ್ಪಾಜಿ, ನಮ್ಮ ಅಮ್ಮ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
Advertisement
ಡಾ. ರಾಜ್ ಕುಮಾರ್ ಎಂದರೆ ಒಬ್ಬ ಸಾಧಕ. ಸ್ವಾಮಿ ವಿವೇಕನಂದರವರು ಒಬ್ಬ ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಹೇಳಿದ್ದಾರೆ. ಒಬ್ಬ ಸಾಧಕ ಸಾವಿನ ನಂತರವೂ ಬದುಕಬಲ್ಲ. ನಾವು ಎಂತಹ ಶ್ರೀಮಂತ ಬದುಕನ್ನು ಬದುಕಬೇಕು ಮತ್ತು ಎಂತಹ ಮೌಲಿಕ ಬದುಕನ್ನು ಬದುಕಬೇಕು ಎಂದರೆ ಸಾವಿನ ನಂತರವೂ ನಮ್ಮ ಬದುಕಿರಬೇಕು. ಜನ ಅದನ್ನು ನೆನಪಿಸಿಕೊಳ್ಳಬೇಕು. ಅಂತವರನ್ನು ಸಾಧಕರು ಎಂದು ಕರೆಯುತ್ತಾರೆ. ಅಂತಹ ಸಾಧನೆ ಮಾಡಿರುವಂತಹ ಸ್ಟಾರ್ ಅಂದರೆ ಆಕಾಶದಲ್ಲಿರುವಂತಹ ನಕ್ಷತ್ರ ಡಾ.ರಾಜ್‍ಕುಮಾರ್ ಎಂದು ಹೊಗಳಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್
ಆಕಾಶದಲ್ಲಿ ಹಲವಾರು ನಕ್ಷತ್ರಗಳಿರಬಹುದು. ಆದರೆ ಒಂದೇ ಒಂದು ನಕ್ಷತ್ರ ಹೆಚ್ಚಾಗಿ ಮಿಂಚುತ್ತಿರುತ್ತದೆ. ಮಿಲಿಯನ್ ಗಟ್ಟಲೇ ಮಿಂಚುತ್ತಿರುವ ತಾರೆಗಳ ನಡುವೆ ಹೆಚ್ಚು ಮಿನುಗುವ ತಾರೆಯೇ ಡಾ. ರಾಜ್ ಕುಮಾರ್. ಅವರ ನುಡಿ, ಮೌಲ್ಯ, ಸರಳತನ ನಾವೆಲ್ಲರೂ ಕಲಿಯಬೇಕು. ಅದರಲ್ಲಿಯೂ ಅಧಿಕಾರದಲ್ಲಿರುವವರು, ಬಹಳಷ್ಟು ಜನಪ್ರಿಯರಾಗಿರುವವರು ಯಾವ ರೀತಿ ಸರಳವಾಗಿರಬೇಕೆಂದು ಹಾಗೂ ಮಾನವೀಯತೆಯನ್ನು ಕಲಿಯಬೇಕು. ಡಾ ರಾಜ್ ಕುಮಾರ್‍ರವರು ಎಷ್ಟು ಎತ್ತರಕ್ಕೆ ಸ್ಟಾರ್ ಆಗಿದ್ದಾರೋ, ಅವರಷ್ಟು ವಿಶಾಲಹೃದಯತೆ ಯಾರಿಗೂ ಇರಲು ಸಾಧ್ಯವಿಲ್ಲ ಅಂತ ಭಾವಿಸುತ್ತೇನೆ ಎಂದಿದ್ದಾರೆ.
ಒಂದು ಚಿಕ್ಕ ಮಗುವಿನಲ್ಲಿರುವ ಮುಗ್ದತೆ ರಾಜ್‌ಕುಮಾರ್‌ರವರಲ್ಲಿ ಇತ್ತು. ಒಂದು ಮಗುವಿನಲ್ಲಿ ತಿಳಿದುಕೊಳ್ಳುವಂತಹ ಹಂಬಲವಿರುತ್ತದೆ. ಆ ಹಂಬಲಕ್ಕೆ ನಾವು ಜ್ಞಾನ, ಅರ್ಥವನ್ನು ನೀಡಬೇಕು. ರಾಜ್‌ಕುಮಾರ್‌ರವರಿಗೆ ಪ್ರತಿಯೊಂದನ್ನು ಕಲಿಯುವ ಹಂಬಲ ಇತ್ತು. ಆದರೆ ಅವರಲ್ಲಿ ಮುಗ್ಧತೆ ಎಂದು ಕೂಡ ಕಡಿಮೆಯಾಗಲಿಲ್ಲ. ಅವರೊಬ್ಬರು ಸ್ಫೂರ್ತಿದಾಯಕ ಮನುಷ್ಯ. ತದ್ವಿರುದ್ಧವಾದಂತಹ ಗುಣಗಳನ್ನು ಕಾಪಾಡಿಕೊಂಡು ಯಶಸ್ವಿಯಾಗುವಂತಹದು ಬಹಳ ಕಷ್ಟ. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟ. ಯಾವ ವ್ಯಕ್ತಿ ಎಲ್ಲವನ್ನು ಕಲಿಯುವ ಸಾಮರ್ಥ್ಯ ಹಾಗೂ ಮುಗ್ಧತೆಯನ್ನು ಹೊಂದಿರುವುದು ಬಹಳ ಕಷ್ಟ. ಆದರೆ ಅದನ್ನು ಅವರು ಸಾಧಿಸಿದ್ದಾರೆ. ಈ ಮಾತಗಳನ್ನು ನಾನು ಎಲ್ಲ ಸಿನಿಮಾ ತಾರೆಯರಿಗೆ, ಎಲ್ಲಾ ನಾಯಕರಿಗೆ ಹೇಳಲು ಸಾಧ್ಯವಿಲ್ಲ. ಈ ಗುಣ ಆತ್ಮ ಶುದ್ಧಿ ಇದ್ದಾಗ ಮಾತ್ರ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮದುವೆಯ ಫೋಟೋ ಹಂಚಿಕೊಂಡ ರಿಯಾ ಕಪೂರ್, ಕರಣ್ ಬೂಲಾನಿ
ರಾಘಣ್ಣ ನನ್ನ ಆತ್ಮೀಯರು, ಪಾರ್ವತಮ್ಮನವರಿಗೂ ನನ್ನ ಮೇಲೆ ಬಹಳ ಪ್ರೀತಿ, ಅವರು ಒಂದು ದಿನ ನನಗೆ ಗ್ಯಾಸ್ ಕನೆಕ್ಷನ್ ಕಡಿಮೆಯಾಗಿದೆ ಏನಾದರೂ ಮಾಡಿಕೊಡಿಸಲು ಆಗುತ್ತಾ ಎಂದು ನನ್ನ ಬಳಿ ಕೇಳಿದ್ದರು. ಆಗ ಎಂಪಿ ಎಲೆಕ್ಷನ್ ನಡೆಯುತ್ತಿತ್ತು. ಆಗ ನಮ್ಮ ತಂದೆಯ ಕೋಟಾದಲ್ಲಿ ಒಂದು ಗ್ಯಾಸ್ ಕನೆಕ್ಷನ್ ಕೊಡಿಸಿದ್ದೆ. ಆ ಗ್ಯಾಸ್ ಕನೆಕ್ಷನ್ ಕೊಡಿಸಿದ ಎರಡು ದಿನಕ್ಕೆ ಪಾರ್ವತಮ್ಮನವರು ನೀನು ಕೊಡಿಸಿದ ಗ್ಯಾಸ್‍ನಲ್ಲಿ ಅಡುಗೆ ಮಾಡಿದ್ದೇನೆ ನಮ್ಮ ಮನೆಗೆ ಊಟಕ್ಕೆ ಬರಬೇಕು ಎಂದಿದ್ದರು. ಜೊತೆಗೆ ಹುಬ್ಬಳ್ಳಿಯಲ್ಲಿರುವ ಆಫೀಸ್ ನೋಡಿಕೊಳ್ಳಲು ರಾಘವೇಂದ್ರ ರಾಜ್‍ಕುಮಾರ್ ಹುಬ್ಬಳ್ಳಿಗೆ ಬರುತ್ತಾರೆ. ನೀವು ಅವರನ್ನು ನೋಡಿಕೊಳ್ಳಬೇಕು ಎಂದಿದ್ದರು. ಹಾಗೆಯೇ ಅಪ್ಪು ಹಾಗೂ ಶಿವಣ್ಣ ಕೂಡ ಬಹಳ ಆತ್ಮೀಯರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್