ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‍ಸಿಎ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿ ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುವ ಮೂಲಕ ಕೆಲ ಹೊತ್ತು ಕ್ರಿಕೆಟ್ ಆಡಿದರು.
Advertisement
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂತನ ಯೂನಿಪೋಲ್ ಫ್ಲಡ್ ಲೈಟ್ ಟವರ್ ಉದ್ಘಾಟಿಸಿದ ಬಳಿಕ ಸಿಎಂ, ಹೊನಲು ಬೆಳಕಿನಲ್ಲಿ ಕ್ರಿಕೆಟ್ ಆಡಿದರು. ಬ್ಯಾಟ್ ಬೀಸಿ ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ಎನ್‍ಡಿ ರಾಬಟ್ರ್ಸ್ ಬೌಲಿಂಗ್ ನೋಡುವುದೇ ನಮಗೆ ರೋಚಕ. ಇಂಡಿಯಾ, ಪಾಕಿಸ್ತಾನ ಮ್ಯಾಚ್ ಆದಾಗ ನಾವೂ ಇಡೀ ರಾತ್ರಿ ಸೆಲೆಬ್ರೇಶನ್ ಮಾಡ್ತಿದ್ವಿ. ನಾನು ಕೂಡ ಚಿಕ್ಕವನಿದ್ದಾಗ ಗುಂಪಲ್ಲಿ ನುಗ್ಗಿಕೊಂಡು ಬರುತ್ತಿದ್ದೆ ಎಂದು ಬೊಮ್ಮಾಯಿ ಮತ್ತೊಮ್ಮೆ ಆ ದಿನಗಳನ್ನು ಮೆಲುಕು ಹಾಕಿಕೊಂಡರು. ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್
Advertisement
Advertisement
ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಅಚ್ಚುಕಟ್ಟಾಗಿ ಇರುವುದನ್ನು ಕಂಡು ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಕ್ರೀಡಾ ಕ್ಷೇತ್ರದಲ್ಲಿ ಕೆಎಸ್‍ಸಿಎ ತನ್ನ ಪ್ರಭಾವನ್ನು ಬೀರಿದೆ. ಕ್ರಿಕೆಟ್ ದಿಗ್ಗಜರೆಲ್ಲಾ ಇಲ್ಲಿ ಆಟ ಆಡಿದ್ದಾರೆ. ನಾನು ರೋಚಕ ಪಂದ್ಯಗಳನ್ನು ಈ ಹಿಂದೆ ಕೆಎಸ್‍ಸಿಎಗೆ ಬಂದು ವೀಕ್ಷಿಸಿದ್ದೇನೆ ಎಂದು ನೆನಪಿಸಿಕೊಂಡರು. ಈಗ ಸ್ಟೇಡಿಯಂ ತುಂಬಾ ಅದ್ಭುತವಾಗಿ ಕಟ್ಟಿದ್ದೀರಿ. ಇಲ್ಲಿ ಹಳೇ ಫೋಟೋಗ್ರಾಫ್ಸ್ ನೋಡಿದ್ರೆ ಖುಷಿಯಾಗುತ್ತೆ. ಜಿ.ಆರ್.ವಿಶ್ವನಾಥ್ ಜೊತೆ ನಾವಿಲ್ಲಿ ಬಹಳಷ್ಟು ಗ್ಲಾಸ್‍ಗಳನ್ನ ಎಕ್ಸ್ ಚೇಂಜ್ ಮಾಡಿಕೊಂಡ ನೆನಪುಗಳಿವೆ ಎಂದರು.
Advertisement
ಕೆಎಸ್‍ಸಿಎ ನೋಡಿಕೊಂಡು ಹಾಕಿ ಹಾಗೂ ಫುಟ್ಬಾಲ್ ಸ್ಟೇಡಿಯಂ ಕೂಡ ಪ್ರಗತಿ ಹೊಂದಿವೆ. ಸಾಮಾನ್ಯವಾಗಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಲ್ಲೂ ಬಹಳ ರಾಜಕೀಯವಿದೆ. ಬಿಸಿಸಿಐನಲ್ಲೂ ಇದೆ ಆದರೆ ಸುಪ್ರೀಂಕೋರ್ಟ್ ಮಧ್ಯಸ್ಥಿಕೆಯಿಂದ ಅದು ಕಂಟ್ರೋಲ್ ನಲ್ಲಿದೆ. ಆದರೆ ನಮ್ಮ ರಾಜ್ಯದಲ್ಲಿ ಎಲ್ಲರ ನಡುವೆ ತುಂಬಾ ಹೊಂದಾಣಿಕೆ ಇದೆ ಹಿರಿಯರಿಗೂ ಕೂಡ ತುಂಬಾ ಗೌರವ ಕೊಡುತ್ತಾರೆ. ಸರ್ಕಾರ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ಇಂಗ್ಲೆಂಡ್ ನಲ್ಲಿ ಲಾಡ್ರ್ಸ್ ನೋಡೋಕೆ ಹೋಗುವ ಹಾಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ನೋಡೋಕೆ ಬರುತ್ತಾರೆ. ಇಲ್ಲಿ ಸ್ಟೇಡಿಯಂ ನೋಡೋಕೆ ಬರುವವರಿಗೆ ಟಿಕೆಟ್ ಮಾಡಿ ಅವಕಾಶ ಬಳಸಿಕೊಳ್ಳಿ ಎಂದು ಸಿಎಂ ಸಲಹೆ ನೀಡಿದರು. ಇದನ್ನೂ ಓದಿ: ಜಾರ್ಖಂಡ್ ತಂಡದ ಯಶಸ್ಸು- ಬಿಸಿಸಿಐ ಪ್ಲ್ಯಾನ್ ಧೋನಿ ಟೀಂ ಇಂಡಿಯಾ ಮೆಂಟರ್
ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ, ಸಚಿವ ಮುನಿರತ್ನ, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಭಾಗವಹಿಸಿದ್ದರು.