ಬೆಂಗಳೂರು: ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಜನಹಿತಕ್ಕಾಗಿ ನಾವು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
2018ರಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿದ್ದ ಒಂದನ್ನೂ ಭಾ.ಜ.ಪ(BJP) ಈಡೇರಿಸಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಂದ ಹೆಚ್ವಿನದೇನೂ ನಿರೀಕ್ಷೆ ಮಾಡಲಾಗುವುದಿಲ್ಲ. ಜನಹಿತ ಏನಾಗಿದೆ ಎನ್ನುವುದನ್ನು ನೋಡಬೇಕು. ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು. ನಮ್ಮ ಪ್ರಣಾಳಿಕೆಯ ಘೋಷಣೆಗಳಲ್ಲಿ 96 ರಷ್ಟು ಅನುಷ್ಠಾನ ಮಾಡಿರುವುದಾಗಿ ಅವರು ಹೇಳಿದ್ದರು. ಆದರೂ ಜನ ತಿರಸ್ಕಾರ ಮಾಡಿದರು. ಇದನ್ನೂ ಓದಿ: ಮಹಾತ್ಮಾ ಗಾಂಧಿ ಆದರ್ಶಗಳು ಭಾರತದ ಆಧಾರಸ್ಥಂಭಗಳು: ಬಸವರಾಜ ಬೊಮ್ಮಾಯಿ
Advertisement
Advertisement
ಕ್ರಾರ್ಯಕ್ರಮದ ಘೋಷಣೆ ಮಾತ್ರವಲ್ಲ ಅನುಷ್ಠಾನವೂ ಆಗಬೇಕು. ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಯಾವ ರೀತಿ ಅನುಷ್ಠಾನ ಮಾಡಿದರೆ ಯಾರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು ದುಡಿಯುವ ವರ್ಗ, ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಒಳ್ಳೆಯದು ಮಾಡಬೇಕೆನ್ನುವ ಅರಿವಿದೆ ಎಂದರು. ಇದನ್ನೂ ಓದಿ: 15 ದುರಂಹಕಾರಿ ಸಚಿವರನ್ನ ವಜಾ ಮಾಡಿ: ರೇಣುಕಾಚಾರ್ಯ ಗುಡುಗು
Advertisement
ಮೈಸೂರಿನಲ್ಲಿ ಸಂಸದರು ಹಾಗೂ ಶಾಸಕರ ನಡುವೆ ಜಗಳ ಅಲ್ಲ. ಅದು ಅಭಿವೃದ್ಧಿ ಆಗಬೇಕೆನ್ನುವ ವಿಭಿನ್ನ ದೃಷ್ಟಿಕೋನಗಳು. ಶಾಸಕರು ಮತ್ತು ಸಂಸದರನ್ನು ಕರೆದು ಮಾತನಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಒಳಜಗಳ:
ಕಾಂಗ್ರೆಸ್‍ನಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಒಳಜಗಳ ಬೀದಿಗೆ ಬಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅದು ಅವರ ಆಂತರಿಕ ವಿಚಾರವಾದರೂ, ಸಾರ್ವತ್ರಿಕವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಇದೊಂದೇ ಪ್ರಸಂಗವಲ್ಲ, ಹಲವಾರು ಆಗಿವೆ. ಈಗ ಅದು ಬಹಿರಂಗವಾಗಿದೆ. ಆದರೆ, ಕಾಂಗ್ರೆಸ್ ಯಾವಾಗಲೂ ಜನಹಿತಕ್ಕಾಗಿ ಎಂದೂ ಕೆಲಸ ಮಾಡಿಲ್ಲ. ಆಡಳಿತ ಪಕ್ಷದಲ್ಲಿದ್ದಾಗಲೂ ಮಾಡಿಲ್ಲ, ವಿರೋಧ ಪಕ್ಷದಲ್ಲಿದ್ದಾಗಲೂ ಮಾಡಿಲ್ಲ. ಅಧಿಕಾರವನ್ನು ಹೇಗೆ ಹಿಡಿಯಬೇಕು, ಯಾವ ರೀತಿ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಬೇಕು ಎನ್ನುವುದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಯಾರೇ ನಾಯಕರಾಗಲಿ, ತಮ್ಮ ನೀತಿ ನಿಲುವುಗಳು, ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಅದು ಅವರ ಗುಣಧರ್ಮ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳ 3ನೇ ಅಲೆ ಮುಂದುವರಿಸಿದ್ದಾರೆ: ಸುಧಾಕರ್
ಸಂಪುಟ ವಿಸ್ತರಣೆ:
ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ. ವರಿಷ್ಠರು ಕರೆದಾಗ ಹೋಗಲು ಸಿದ್ಧನಿದ್ದೇನೆ. ಬಜೆಟ್ ಇದ್ದ ಸಂದರ್ಭದಲ್ಲಿ ಎಂ.ಪಿಗಳನ್ನು ಭೇಟಿಯಾಗುವ ಸಂಪ್ರದಾಯವಿದೆ. ಆದಷ್ಟು ಬೇಗ ಸಂಸದರನ್ನು ದೆಹಲಿಯಲ್ಲಿ ಭೇಟಿಯಾಗುವುದಾಗಿ ತಿಳಿಸಿದರು.
ನಿಗಮ ಮಂಡಳಿಗಳ ನೇಮಕಾತಿ:
ನಿಗಮ ಮಂಡಳಿಗಳ ನೇಮಕಾತಿಯ ಬಗ್ಗೆ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ ಎಂಬ ಚರ್ಚೆಯಾಗುತ್ತಿರುವ ಬಗ್ಗೆ ಉತ್ತರಿಸಿ, ಪಕ್ಷದಲ್ಲಿ ಆಂತರಿಕವಾಗಿ ತೀರ್ಮಾನ ಮಾಡಲಾಗುತ್ತದೆ ಎಂದರು.