ಬೆಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ (Annabhagya) ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರ ಅನ್ನಭಾಗ್ಯ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಗದ ಹಿನ್ನೆಲೆ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ಕುರಿತು ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ (Tweet) ಮೂಲಕ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನೈತಿಕ ಹೊಣೆ ಹೊತ್ತು ಕಟೀಲ್ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ
Advertisement
Advertisement
ಟ್ವೀಟ್‌ನಲ್ಲಿ ಏನಿದೆ?
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿ ಮಾಡುವಲ್ಲಿ ಜನರಿಗೆ ದೋಖಾ ಮಾಡುವುದು ಮುಂದುವರೆಸಿದೆ. ಹತ್ತು ಕೆಜಿ ಅಕ್ಕಿ ಕೊಡುವ ಗ್ಯಾರೆಂಟಿ ನೀಡಿ ಈಗ ಒಬ್ಬರಿಗೆ 170 ರೂ. ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಬಯಲಾಗಿದೆ. ಇದನ್ನೂ ಓದಿ: 15 ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ – ಕಂತೆ ಕಂತೆ ನೋಟುಗಳು ಪತ್ತೆ
Advertisement
Advertisement
ರಾಜ್ಯ ಸರ್ಕಾರ ನೀಡುವ 170 ರೂ. ಗ್ರಾಮೀಣ ಮಹಿಳೆಯ ದಿನದ ಕೂಲಿಯ ಅರ್ಧದಷ್ಟು ಹಣವೂ ಆಗುವುದಿಲ್ಲ. ಸುಳ್ಳು ಗ್ಯಾರೆಂಟಿಗಳನ್ನು ಈಡೇರಿಸಲಾಗದೇ ಈಗ ಜನರಿಗೆ ದ್ರೋಹ ಮಾಡಲಾಗುತ್ತಿದೆ. ಇದನ್ನೂ ಓದಿ: ಐದಲ್ಲ, 10 ಕೆಜಿ ಅಕ್ಕಿಗೆ ಸರ್ಕಾರ ಹಣ ನೀಡಬೇಕು – ಜೋಶಿ ವಾಗ್ದಾಳಿ
ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 60 ರೂ.ಗಳಂತೆ ಹತ್ತು ಕೆಜಿಗೆ ತಗುಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನರಿಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಕ್ಕಿ ಕೊಡ್ತಾರೋ, ದುಡ್ಡು ಕೊಡ್ತಾರೋ ಅದು ಅವರ ಹಣೆಬರಹ: ಹೆಚ್‍ಡಿಕೆ
Web Stories