Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಿಸಿದ ಬಸವರಾಜ ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಿಸಿದ ಬಸವರಾಜ ಬೊಮ್ಮಾಯಿ

Bengaluru City

ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಿಸಿದ ಬಸವರಾಜ ಬೊಮ್ಮಾಯಿ

Public TV
Last updated: April 2, 2022 2:55 pm
Public TV
Share
3 Min Read
BASAVARAJ BOMMAI
SHARE

ಬೆಂಗಳೂರು: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಘೋಷಿಸಿದರು.

ಇಂದು ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ ಇದೆ. ರಾಷ್ಟ್ರದಲ್ಲಿ ಕರ್ನಾಟಕ ಪೊಲೀಸ್ ನಂಬರ್‌ 1 ಸ್ಥಾನಕ್ಕೆ ಏರಲಿ ಎಂದರು.

police web

ಅಂತ:ಕರಣ, ಮಾನವೀಯತೆ ಬಹಳ ಮುಖ್ಯ: ನಾಡಿನ, ಜನರ ರಕ್ಷಣೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವುದು ಇಲಾಖೆಯ ಪ್ರಮುಖ ಕರ್ತವ್ಯ. ಇಲಾಖೆಯಲ್ಲಿ ಶಿಸ್ತು, ದಕ್ಷತೆ, ನಿಷ್ಠೆ ಬಹಳ ಮುಖ್ಯ. ದೇಶದಲ್ಲಿ ಕರ್ನಾಟಕ ಪೊಲೀಸ್ ಉನ್ನತ ಸ್ಥಾನದಲ್ಲಿದೆ. ಚುನಾವಣೆ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪೊಲೀಸ್ ತುಕಡಿ ಕರೆಸುವಾಗ ಕರ್ನಾಟಕಕ್ಕೆ ಆದ್ಯತೆ ನೀಡುತ್ತಾರೆ. ನಿಷ್ಪಕ್ಷಪಾತ, ಮಾನವೀಯತೆ, ಅಂತ:ಕಾರಣ ಹಾಗೂ ನಿಸ್ಪೃಹ ಕರ್ತವ್ಯಕ್ಕೆ ನಮ್ಮ ಪೊಲೀಸ್ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಸಮಾಜದ ಸ್ವಾಸ್ಥ್ಯ, ಶಾಂತಿ ಕಾಪಾಡಲು ತಮ್ಮ ಅಂತ:ಕಾರಣ, ಮಾನವೀಯತೆ ಬಹಳ ಮುಖ್ಯ. ನ್ಯಾಯ ನಿಷ್ಠುರವಾಗಿ ಕೆಲಸ ಮಾಡಬೇಕು. ಫೋರೆನ್ಸಿಕ್ ಪ್ರಯೋಗಾಲಯ ಅಪರಾಧಿಗಳ ಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೋರ್ಟ್‌ಗಳು ಅದರ ವರದಿಗೆ ಮಹತ್ವ ನೀಡುತ್ತದೆ. ಬೆಂಗಳೂರಿನಲ್ಲಿ ನಾರ್ಕೋಟಿಕ್ಸ್, ಸೈಬರ್ ಹಾಗೂ ಫೋರೆನ್ಸಿಕ್ ಲ್ಯಾಬ್ ವುಳ್ಳ ಠಾಣೆಗಳನ್ನು ತೆರೆಯಲಾಗಿದೆ ಎಂದು ಭರವಸೆ ನೀಡಿದರು.

bommai 3

ಹುಬ್ಬಳ್ಳಿ ಬಳ್ಳಾರಿಯಲ್ಲಿಯೂ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿಯೂ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.

ಇಂಟೆಲಿಜೆನ್ಸ್ ಸಧೃಢತೆಗೆ ಕ್ರಮ:  ಪೊಲೀಸರ ಬುದ್ಧಿವಂತಿಕೆಯೂ ಮುಖ್ಯ. ಹೊಸ ತರಬೇತಿ ವ್ಯವಸ್ಥೆ ಮತ್ತು ಸಿಬ್ಬಂದಿ ಹೆಚ್ಚಿಸುವ ಮೂಲಕ ಇಂಟೆಲಿಜೆನ್ಸ್ ನ್ನು ಇನ್ನಷ್ಟು ಸಧೃಢ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

ಕಲ್ಯಾಣ ಕಾರ್ಯಕ್ರಮ: ಪೊಲೀಸರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸ್ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ, ಸೇವೆ, ಬಂದೋಬಸ್ತಿಗೆ ಭತ್ಯೆ, ಬಡ್ತಿಗಳನ್ನು ನೀಡಿದೆ. ಪೊಲೀಸ್ ಗೃಹ ಯೋಜನೆಯಡಿ 10 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ಹಾಗೂ ಅನುದಾನ ನೀಡಿದೆ. ಪೊಲೀಸರ ಆರೋಗ್ಯಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪೊಲೀಸರ ದಕ್ಷತೆಗೆ ಅನುಗುಣವಾಗಿ ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ವೇಗವಾಗಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು.

basavaraj bommai 3

ಆಧುನೀಕರಣ: ಆಧುನೀಕರಣಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಕರ್ನಾಟಕ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಸೈಬರ್ ಅಪರಾಧ ಮತ್ತು ನಾರ್ಕೋಟಿಕ್ಸ್ ತಡೆಯಲು ದೊಡ್ಡ ಪ್ರಮಾಣದಲ್ಲಿ ಆಧುನೀಕರಣ ಮಾಡುವ ಅವಶ್ಯಕತೆ ಇದೆ. Crime leads the law ಎನ್ನುವುದನ್ನು ಬದಲಾಯಿಸಿ ಕಾನೂನು ಅಪರಾಧಕ್ಕೆ ಮುಂಚಿತವಾಗಿ ರೂಪುಗೊಳ್ಳುವಂತೆ ಆಗಬೇಕು. ಅದಕ್ಕಾಗಿ ಸಿಬ್ಬಂದಿಗಳ ತರಬೇತಿ, ಆಧುನಿಕ ತಂತ್ರಜ್ಞಾನ ಬಳಕೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಕರ್ನಾಟಕ ಪೊಲೀಸ್ ಕೈಗೊಂಡಿದೆ ಎಂದರು.

ಆರ್ಥಿಕ ಅಪರಾಧಗಳನ್ನು ಪತ್ತೆ ಹಚ್ಚಲು ಎಸ್.ಎಂ.ಎಸ್. ಮೂಲಕವೇ ಪ್ರಕರಣ ದಾಖಲಿಸಿ ಖಾತೆಗಳನ್ನು ಮುಟ್ಟುಗೋಲು ಹಾಕುವ ಕ್ರಮ ಕೈಗೊಂಡಿದೆ. ಕಳ್ಳತನ ನಿಲ್ಲಿಸಲು ಕರ್ನಾಟಕ ಪೊಲೀಸರಿಗೆ ಸಾಧ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

DJ HALLI DRUG 2 1

ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿರಲಿ: ಮಾದಕವಸ್ತು ಮಾರಾಟದ ವಿರುದ್ಧ ಸಮರ ಸಾರಿರುವ ಕರ್ನಾಟಕ ಪೊಲೀಸ್‌ರು ಅತಿ ಹೆಚ್ಚು ಡ್ರಗ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನೂತನ ಕಾನೂನಿನ ಅನ್ವಯ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿ ನಡೆಯಬೇಕು. ಸಂಪೂರ್ಣವಾಗಿ ನಿಷೇಧ ವಾಗುವವರೆಗೂ ಪ್ರಯತ್ನ ಜಾರಿಯಲ್ಲಿರಬೇಕು. ಶಾಲಾ, ಕಾಲೇಜು, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು. ಸೈಬರ್ ಅಪರಾಧಗಳನ್ನು ಕಂಡುಹಿಡಿಯಲು ಪೊಲೀಸರಿಗೆ ವಿಶೇಷ ತರಬೇತಿ ನೀಡಬೇಕು ಎಂದ ಅವರು, ಕೋವಿಡ್ ಸಂದರ್ಭದಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದು ಕೆಲಸ ಮಾಡಿರುವುದು ಶ್ಲಾಘನೀಯ ಮತ್ತು ದಾಖಲಾರ್ಹ ಎಂದು ಅಭಿನಂದನೆ ಸಲ್ಲಿಸಿದರು.

TAGGED:Basavaraj Bommaibengalurudrugspoliceಡ್ರಗ್ಸ್ಪೊಲೀಸ್ಬಸವರಾಜ ಬೊಮ್ಮಾಯಿಬೆಂಗಳೂರು
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Punjab Kings
Cricket

ತವರಲ್ಲಿ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಮುಖಭಂಗ – ಪಂಜಾಬ್‌ಗೆ 5 ವಿಕೆಟ್‌ಗಳ ಜಯ

Public TV
By Public TV
7 hours ago
HE x TIaUAE4IKr
Bengaluru City

ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನ

Public TV
By Public TV
8 hours ago
Earthquake
Latest

ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ; ದೆಹಲಿ-ಎನ್‌ಸಿಆರ್‌ನಲ್ಲೂ ಕಂಪನದ ಅನುಭವ

Public TV
By Public TV
8 hours ago
AI Image
Latest

ಅಮೆರಿಕದ ಎಫ್-35 ಸೇರಿ ಜೆಟ್, ಕಾಪ್ಟರ್ ಉಡೀಸ್ – ಓರ್ವ ಪೈಲಟ್ ಸೆರೆ ಅಂತಿದೆ ಇರಾನ್

Public TV
By Public TV
8 hours ago
Shwetha
Crime

ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನರ್ಸ್‌ ಆತ್ಮಹತ್ಯೆ – ನಾಲ್ವರು ಅರೆಸ್ಟ್‌

Public TV
By Public TV
9 hours ago
CRIME
Crime

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಚಾಕು ತೋರಿಸಿ ಮಹಿಳೆಯ ಅತ್ಯಾಚಾರ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?