ಬೆಂಗಳೂರು: ನಮ್ಮ ನಿರ್ಣಯ ಸದನದಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಂದೆಂದೂ ಮಾಡದ ಪ್ರಮಾದವನ್ನ ರಾಜ್ಯ ಸರ್ಕಾರ ಮಾಡಿದೆ. ಸುಳ್ಳು ಹೇಳುವ ದಾಷ್ಟ್ಯತನ ತೋರಿದೆ. ರಾಜ್ಯಕ್ಕೆ ತೆರಿಗೆ ಪಾಲು ಹೆಚ್ಚಿಸಲು ಹೋರಾಟ ಮಾಡಬೇಕಾಯಿತು. ಸೋನಿಯಾ ಗಾಂಧಿ ಕೂಡ ಮಾಡಲಿಲ್ಲ. ನರೇಂದ್ರ ಮೋದಿಯವರು (Narendra Modi) ರಾಜ್ಯದ ತೆರಿಗೆ ಪಾಲು ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿಗೆ 6 ಸಾವಿರ ಕೋಟಿ ರೂ. ಬರಬೇಕು, ಅದೂ ಬರುತ್ತಿದೆ. 15 ಸಾವಿರ ಕೋಟಿ ರೂ. ಸಬ್‍ಅರ್ಬನ್ ರೈಲಿಗೆ ಕೇಂದ್ರ ಸರ್ಕಾರ ಕೊಟ್ಟಿದೆ. ಅದರ ಬಗ್ಗೆ ಕಾಂಗ್ರೆಸ್‍ನವರು ಮಾತನಾಡಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ವಸತಿ ಶಾಲೆಗಳಲ್ಲಿ CBSE ಪಠ್ಯಕ್ರಮ ಜಾರಿ: ಮಹದೇವಪ್ಪ
Advertisement
Advertisement
ಕೇಂದ್ರದಿಂದ ಹಲವಾರು ಯೋಜನೆಗಳು ರಾಜ್ಯಕ್ಕೆ ಬಂದಿವೆ, ಅವುಗಳ ಬಗ್ಗೆ ಮಾತನಾಡಲ್ಲ. ಜಿಎಸ್‍ಟಿ ಪರಿಹಾರ 1 ಲಕ್ಷಕ್ಕೂ ಹೆಚ್ಚು ಹಣ ಬಂದಿದೆ. ಜನರಿಗೆ ಸುಳ್ಳು ಅಂಕಿ-ಅಂಶಗಳನ್ನು ನೀಡುವ ಹೀನ ಕೆಲಸವನ್ನು ಸರ್ಕಾರ ಮಾಡ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂಘರ್ಷ ತರಲು ಹೊರಟಿದ್ದಾರೆ. ಈ ಸತ್ಯವನ್ನ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.
Advertisement
Advertisement
ಬೆಂಗಳೂರಿಗೆ 6000 ಕೋಟಿ ರೂ. ಬರಬೇಕು ಅಂತಾರೆ. ಇವರು ಫೆರಿಫೆರಲ್ ರಿಂಗ್ ರೋಡ್ ಕೆಲಸವೇ ಶುರುವಾಗಿಲ್ಲ. ಭೂ ಸ್ವಾಧೀನವೇ ಆಗದೇ ದುಡ್ಡು ಬಂದಿಲ್ಲ ಎನ್ನುತ್ತಿದ್ದಾರೆ. ನಾವು ಟೆಂಡರ್ ಕರೆದಾಗಲೂ ಭೂ ಸ್ವಾಧೀನ ಆಗಲಿಲ್ಲ. ಇವರು ಫೆರಿಫೆರಲ್ ರಿಂಗ್ ರಸ್ತೆಯ ಭೂ ಸ್ವಾಧೀನ ಮಾಡಿ ನಂತರ ಹಣ ಕೇಳಬೇಕು. ಕೇಂದ್ರ ಸರ್ಕಾರದ ಯೋಜನೆಗಳಿಂದ ಬಂದರು, ಏರ್‌ಪೋರ್ಟ್, ರಸ್ತೆ ಅಭಿವೃದ್ಧಿ ಆಗಿರುವ ಬಗ್ಗೆ ಇವ್ರು ಮಾತನಾಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ SCSP-TSP ಹಣ ಬಳಕೆ – ಸರ್ಕಾರದಿಂದ ಮಾಹಿತಿ