ಚಿತ್ರದುರ್ಗ: ಕಾಂಗ್ರೆಸ್, ಜೆಡಿಎಸ್‍ನವರು ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿಯವರ ನಿವಾಸದಲ್ಲಿ,ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸುವ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್‍ನವರು ಹೇಳ್ತಾರೆ ಹಾಗೆಯೇ ಕಾಂಗ್ರೆಸ್ ಜೊತೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ ಎಂದು ಜೆಡಿಎಸ್‍ನವರು ಹೇಳುತ್ತಾರೆ. ಆದರೆ ಬಿಜೆಪಿ ಸ್ವಂತ ಬಲದ ಮೇಲೆ ಅಭ್ಯರ್ಥಿಯನ್ನು ಚುನಾವಣೆಗೆ ಹಾಕಿದ್ದು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ರೈತರ ಹೋರಾಟಕ್ಕೆ ವರ್ಷ, ದುರಹಂಕಾರ, ದೌರ್ಜನ್ಯಕ್ಕೆ ಬಿಜೆಪಿ ಹೆಸರುವಾಸಿ: ಪ್ರಿಯಾಂಕಾ ವಾದ್ರಾ
Advertisement
Advertisement
ಮಾಜಿ ಸಿಎಂ ಯಡಿಯೂರಪ್ಪ ಅವರು ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಪಡೆಯುವ ಬಗ್ಗೆ ಹೇಳಿದ್ದಾರೆ ಹೊರೆತು ಬಿಎಸ್ ವೈ ಹೇಳಿಕೆಯ ಅರ್ಥ ಇದಕ್ಕೆ ಹೊಂದಾಣಿಕೆ ಎಂಬುದಲ್ಲ. ಆದರೆ ಚುನಾವಣೆಯಲ್ಲಿ ಅಧಿಕವಾಗಿ ಯಾರೇ ಬೆಂಬಲ ನೀಡಿದರೂ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್
Advertisement
Advertisement
ಪ್ರಸ್ತುತ ರಾಜಕೀಯ ವ್ಯವಸ್ಥೆ ಹಾಳಾಗಲು ರಾಷ್ಟ್ರೀಯ ಪಕ್ಷಗಳೇ ಕಾರಣ ಎಂದಿರುವ ದೇವೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ವಿಧಾನ ಪರಿಷತ್ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸ ಇರುತ್ತದೆ. ಹೀಗಾಗಿ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ವ್ಯತ್ಯಾಸ ಇರುತ್ತದೆ ಅಂತ ಹೇಳಿ ಜಾರಿಕೊಂಡರು. ಹಾಗೆಯೇ ಎಲ್ಲೆಡೆ ನವೆಂಬರ್ ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಶೀಘ್ರ ಬೆಳೆಹಾನಿ ಪರಿಹಾರಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಂದು ಹೇಳುವ ಮೂಲಕ ಮಳೆಗೂ ಮುನ್ನವೇ ರಾಜಕಾಲುವೆ ಹಾಗು ಕೆರೆಕಟ್ಟೆಗಳತ್ತ ಸಿಎಂ ಗಮನ ಹರಿಸಿದರೆ ಬೆಂಗಳೂರಿನ ಸುತ್ತ ಮುತ್ತ ಇಷ್ಟೊಂದು ಅವಾಂತರ ನಡೆಯುತ್ತಿರಲಿಲ್ಲ ಎಂದು ಹೇಳಿರುವ ಮಾಜಿಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ