ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ (New Parliament Building) ಜಗಜ್ಯೋತಿ ಬಸವಣ್ಣನವರ ವಚನಗಳಿಗೂ ಜಾಗ ಸಿಕ್ಕಿದ್ದು, ಕ್ನನಡದ ಕಂಪು ಹಬ್ಬಿದೆ.
Advertisement
ಸಂಸತ್ ಭವನದ ಗೋಡೆಯ ಮೇಲೆ `ಕಳಬೇಡ.. ಕೊಲ ಬೇಡ.. ಹುಸಿಯ ನುಡಿಯಲು ಬೇಡ.. ಮುನಿಯಬೇಡ.. ಅನ್ಯರಿಗೆ ಅಸಹ್ಯಪಡಬೇಡ.. ತನ್ನ ಬಣ್ಣಿಸಬೇಡ.. ಇದಿರ ಹಳಿಯಲು ಬೇಡ’ ಎಂದು ಕನ್ನಡದಲ್ಲಿ ಬರೆಯಲಾದ ಬಸವಣ್ಣನವರ (Basavanna) ವಚನದ ಸಾಲುಗಳು ರಾರಾಜಿಸುತ್ತಿವೆ. ಇದನ್ನೂ ಓದಿ: ಭಾನುವಾರ ನೂತನ ಸಂಸತ್ ಭವನ ಉದ್ಘಾಟನೆ – ಏನಿದರ ವಿಶೇಷತೆ?
Advertisement
Advertisement
ಜೊತೆಗೆ ಬಸವೇಶ್ವರರ ಫೋಟೋ ಕೂಡ ಇತರೆ ಮಹನೀಯರ ಫೋಟೋಗಳ ಜೊತೆ ಮಿಂಚುತ್ತಿದೆ. ಸಂಸತ್ ಭವನವನ್ನ ಒಮ್ಮೆ ಸುತ್ತಿ ಬಂದರೇ ಇಡೀ ಭಾರತ ದರ್ಶನವಾಗುತ್ತದೆ. ಪುರಾಣ, ಇತಿಹಾಸ, ನೆಲ-ಜಲ-ಭಾಷೆ ಎಲ್ಲವೂ ಕಣ್ಮುಂದೆ ಬರುವಂತೆ ಚಿತ್ರಿಸಲಾಗಿದೆ. ಇದನ್ನೂ ಓದಿ: New Parliament Building ಉದ್ಘಾಟನೆ – ಈ ಭವನ ಹಿರಿಮೆ, ವಿಶ್ವಾಸದ ಸಂಕೇತ: ಮೋದಿ