ಹಾವೇರಿ: ರಾತ್ರೋರಾತ್ರಿ ಪ್ರತಿಷ್ಠಾಪನೆ ಆಗಿದ್ದ ಬಸವಣ್ಣನ ಮೂರ್ತಿ ತೆರವು ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಮುಖ ವೃತ್ತದಲ್ಲಿ ಭಾನುವಾರ ರಾತ್ರಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.
ರಾಜಕೀಯ ನಾಯಕರ ಮೂರ್ತಿ ಪ್ರತಿಷ್ಠಾಪನೆಗೆ ಯೋಜನೆ ರೂಪಿಸಿಲಾಗಿದೆ ಅಂದುಕೊಂಡು ಗ್ರಾಮದ ಕೆಲವರು ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಿದ್ದರು. ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಭೇಟಿ ನೀಡಿ ಯಾವುದೇ ಮೂರ್ತಿ ಸ್ಥಾಪನೆ ಮಾಡಬೇಕಾದರೆ ಅನುಮತಿ ಪಡೆಯಬೇಕು. ಯಾರು ಬೇಕಾದರೂ ಮೂರ್ತಿ ಸ್ಥಾಪನೆ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ರಾತ್ರಿಯೆಲ್ಲಾ ಸುರಿದ ಮಳೆ – ಜೈನ್ ಆಸ್ಪತ್ರೆಗೆ ನುಗ್ಗಿದ ನೀರು
ಸರ್ಕಾರದ ಅನುಮತಿ ಪಡೆದು ಗೌರವಯುತವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡೋಣ ಅಂತಾ ತಿಳಿ ಹೇಳಿ ಬಸವಣ್ಣನ ಮೂರ್ತಿಯನ್ನು ತೆರವು ಮಾಡಿಸಿದ್ದಾರೆ. ಭಾನುವಾರ ರಾತ್ರಿ ಪ್ರತಿಷ್ಠಾಪನೆ ಆಗಿದ್ದ ಮೂರ್ತಿಯನ್ನು ಸೋಮವಾರ ರಾತ್ರಿ ಅಧಿಕಾರಿಗಳು ತೆರವು ಮಾಡಿಸಿ, ಮೂರ್ತಿ ಪ್ರತಿಷ್ಠಾಪನೆ ಗಲಾಟೆಗೆ ತೆರೆ ಎಳೆದಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕಾಲಿನಲ್ಲಿ ತುಳಿಯುವುದಲ್ಲದೆ ನೆಕ್ಕಿ ರಸ್ಕ್ ಪ್ಯಾಕ್ – ವೀಡಿಯೋ ವೈರಲ್