ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ (Bande Mutt) ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳ ಪೊಲೀಸ್ (Police) ಕಸ್ಟಡಿ ನಾಳೆ ಅಂತ್ಯಗೊಳ್ಳಲಿದೆ.
Advertisement
ನ.5 ಶನಿವಾರ ನಾಳೆ ಮತ್ತೆ ಮಾಗಡಿ ಕೋರ್ಟ್‍ಗೆ (Court) ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಹಾಗೂ ಮಹದೇವಯ್ಯರನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಕಳೆದ ಅಕ್ಟೋಬರ್ 30 ರಂದು ಬಂಧನವಾಗಿದ್ದ ಮೂವರು ಆರೋಪಿಗಳನ್ನು ಸೋಮವಾರ ಕೋರ್ಟ್‍ಗೆ ಹಾಜರು ಪಡಿಸಲಾಗಿತ್ತು ಬಳಿಕ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಸದ್ಯ ನಾಳೆಗೆ ಪೊಲೀಸ್ ಕಸ್ಟಡಿ ಅಂತ್ಯಗೊಳ್ಳಲಿದ್ದು ಈ ಬಗ್ಗೆ ಮತ್ತೆ ಮಾಗಡಿ ಜೆಎಂಎಫ್‍ಸಿ ಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: 4 ಕ್ಷೇತ್ರಗಳ ಪೈಕಿ ಸಿದ್ದು ಎಲ್ಲಿಂದ ಸ್ಪರ್ಧೆ – ನ.13ಕ್ಕೆ ಪ್ರಕಟ ಸಾಧ್ಯತೆ
Advertisement
Advertisement
ಪ್ರಕರಣ ಸಂಬಂಧ ಮತ್ತಷ್ಟು ಸಾಕ್ಷಿ ಕಲೆಹಾಕುವ ನಿಟ್ಟಿನಲ್ಲಿ ಮತ್ತೆ ಪೊಲೀಸರು ಕಸ್ಟಡಿಗೆ ಕೇಳ್ತಾರಾ ಅಥವಾ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ನೀಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ. ಈಗಾಗಲೇ ಪೊಲೀಸ್ ತನಿಖೆ ವೇಳೆ ಕಣ್ಣೂರು ಮಠ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್