ಬೆಂಗಳೂರು: ಫೆ. 3ರಂದು ಬೀದರ್‌ನ ಬಸವ ಕಲ್ಯಾಣದಿಂದ ಬಸ್ ಯಾತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಅದೇ ದಿನ ಮುಳಬಾಗಿಲಿನ ಕುರುಡುಮಲೆಯಿಂದ ಬಸ್ ಯಾತ್ರೆ ಆರಂಭಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಜಂಟಿ ಬಸ್ ಯಾತ್ರೆ ಮಾಡಿರುವ ಉಭಯ ನಾಯಕರು ಈಗ ರಾಜ್ಯದ ಎರಡು ದಿಕ್ಕಿನಿಂದ ಪ್ರತ್ಯೇಕ ಬಸ್ ಯಾತ್ರೆ ಆರಂಭಿಸಲಿದ್ದಾರೆ.
ಅನುಭವ ಮಂಟಪಕ್ಕೆ ಭೇಟಿ ನೀಡಿ ಪ್ರಜಾಧ್ವನಿ ಯಾತ್ರೆ ಪ್ರಾರಂಭಿಸಲಿರುವ ಸಿದ್ದರಾಮಯ್ಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕ ಸಭೆ ನಡೆಸಿ ಅದೇ ದಿನ ಬಾಲ್ಕಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸಿ ಬಸ್ ಯಾತ್ರೆ ಆರಂಭಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂದೇ 2 ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಬಸ್ ಯಾತ್ರೆ ವಿವರ: ಫೆ.4ರಂದು ಔರಾದ್, ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪ್ರಜಾಧ್ವನಿ ನಡೆಯಲಿದ್ದು, ಆ ದಿನದ ಸಂಜೆ ಹುಮ್ನಾಬಾದ್‌ನಲ್ಲಿ ಪ್ರಜಾಧ್ವನಿ ಸಮಾವೇಶ ಹಾಗೂ ಅದೇ ದಿನ ಕಲಬುರ್ಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
Advertisement
ಫೆ.6 ರಂದು ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂನಲ್ಲಿ ಪ್ರಜಾಧ್ವನಿ ನಡೆಯಲಿದೆ. ಫೆ.7ರಂದು ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ ಕ್ಷೇತ್ರದಲ್ಲಿ ಹಾಗೂ ಫೆ. 8ರಂದು ಚಿತ್ತಾಪುರದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಫೆ. 10ರಂದು ಸುರಪೂರ, ಶಹಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಹಾಗೂ ಫೆ. 11ರಂದು ಸಿಂಧಗಿ, ಇಂಡಿ, ನಾಗಠಾಣಾ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಫೆ. 12ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಸ್ ಯಾತ್ರೆ ನಡೆಸಲಿದ್ದಾರೆ.
Advertisement
ಡಿ.ಕೆ. ಶಿವಕುಮಾರ್ ನೇತೃತ್ವದ ಬಸ್ ಯಾತ್ರೆ ವಿವರ: ಫೆ.3ರಂದು ಮುಳಬಾಗಿಲು, ಕೆಜಿಎಫ್ ಕ್ಷೇತ್ರ ಹಾಗೂ ಫೆ. 4ರಂದು ಮಾಲೂರು, ದೇವನಹಳ್ಳಿ ಕ್ಷೇತ್ರದಲ್ಲಿ ಪ್ರಜಾಧ್ವನಿ (Praja Dhwani) ಸಮಾವೇಶ ನಡೆಯಲಿದೆ. ಫೆ.6ರಂದು ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಫೆ. 7ರಂದು ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಫೆ. 8ರಂದು ಶಿಕಾರಿಪುರ, ಸೊರಬ, ಸಾಗರ ತಾಲೂಕಿನಲ್ಲಿ ಹಾಗೂ ಫೆ. 9ರಂದು ತೀರ್ಥಹಳ್ಳಿ, ಭದ್ರಾವತಿಯಲ್ಲಿ ಡಿಕೆಶಿವಕುಮಾರ್ ಪ್ರಜಾಧ್ವನಿ ಬಸ್ ಯಾತ್ರೆ ಸಾಗಲಿದೆ. ಉಭಯ ನಾಯಕರು ಒಂದೇ ದಿನ ರಾಜ್ಯದ ಬೇರೆ ಬೇರೆ ದಿಕ್ಕಿನಿಂದ ಬಸ್ ಯಾತ್ರೆ ಆರಂಭಿಸಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k