BelgaumDistrictsKarnatakaLatestMain Post

ಒತ್ತಾಯ ಪೂರ್ವಕ ಮತಾಂತರ ಸರಿಯಲ್ಲ: ಬಸವ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಸ್ವೀಕರಿಸುವ ಹಕ್ಕು ಇದೆ. ಆದರೆ ಒತ್ತಾಯ ಪೂರ್ವಕವಾದ ಮತಾಂತರ ಸರಿಯಲ್ಲ ಎಂದು ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ರಕ್ತ ದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಧರ್ಮವನ್ನು ಪೂಜಿಸುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಒತ್ತಾಯ ಪೂರ್ವಕ, ಆಮಿಷವೊಡ್ಡಿ ಅಥವಾ ಬಲವಂತದ ಮೂಲಕ ದೌರ್ಬಲ್ಯವನ್ನು ಬಳಸಿಕೊಂಡು ಧರ್ಮಕ್ಕೆ ಸೇರ್ಪಡೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ನಮ್ಮ ಸಮುದಾಯದಲ್ಲಿಯೂ ಮತಾಂತರ ಆಗಿರುವುದು ಬೆಳಕಿಗೆ ಬಂದಿದೆ. ಬಲವಂತದ ಮತಾಂತರ ಬಗ್ಗೆ ಯಾವುದೇ ದಾರ್ಶನಿಕರು ಹೇಳಿಲ್ಲ. ಹೃದಾಯಂತರ ಮೂಲಕ ಧರ್ಮವನ್ನು ಒಪ್ಪಿಕೊಳ್ಳಬೇಕು. ದೇಶದಲ್ಲಿ ಒತ್ತಾಯ ಪೂರ್ವಕ ಮತಾಂತರ ಸರಿಯಲ್ಲ ಎಂದರು. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

ಮೀಸಲಾತಿ ಬಗ್ಗೆ ಮಾತನಾಡಿದ ಅವರು, ಕಳೆದ ವರ್ಷ ಮೀಸಲಾತಿಗಾಗಿ ಹೋರಾಟ ಆರಂಭ ಮಾಡಿದ್ದೆವು. ಈ ಮೀಸಲಾತಿ ಚಳವಳಿಗೆ 2022ಕ್ಕೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

ರಕ್ತದಾನ ಜಾಗೃತಿ ಕುರಿತು ಮಾತನಾಡಿದ ಅವರು, ಇಂದು ರಕ್ತದಾನದ ಕಾರ್ಯಕ್ರಮ ಎಲ್ಲಾ ಕಡೆ ನಡೆಯುತ್ತಿದೆ. ಈ ಮೂಲಕ ಸರಕಾರಕ್ಕೆ ಜಾಗೃತಿ ಮೂಡಿಸುತ್ತಿದ್ದೇವೆ. ನಾನೇ ಇಂದು ರಕ್ತವನ್ನು ಕೊಟ್ಟಿದ್ದೇನೆ. ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿಎಂ ಫೋನ್ ಮಾಡಿ ಶುಭಾಶಯ ಕೋರಿದರು ಎಂದರು. ಇದನ್ನೂ ಓದಿ: ರಾಮಮಂದಿರ ಟ್ರಸ್ಟ್ ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

Leave a Reply

Your email address will not be published.

Back to top button