ವಿಜಯಪುರ: ಬಸವ ಜಯಂತಿಯಂದೇ ಜಗಜ್ಯೋತಿ ಬಸವಣ್ಣನಿಗೆ ಅಪಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
Advertisement
ಜಗಜ್ಯೋತಿ ಬಸವೇಶ್ವರ ದಿನಾಚಾರಣೆಯನ್ನು ವಿಜಯಪುರದಲ್ಲಿ ಆದ್ಧೂರಿಯಾಗಿ ಆಚರಿಸಲಾಯಿತು. ನಗರದ ಬಸವೇಶ್ವರರ ಮೂರ್ತಿ ಎದುರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಎಸ್ಪಿ ಆನಂದ ಕುಮಾರ ಸೇರಿದಂತೆ ಹಲವರು ಭಾಗಿ ಆಗಿದ್ದರು. ಇದೆ ವೇಳೆ ಬಸವೇಶ್ವರರಿಗೆ ಅಪಮಾನ ಮಾಡಿದ ಘಟನೆ ಕೂಡ ನಡೆಯಿತು. ಇದನ್ನೂ ಓದಿ: ಮಠದಲ್ಲಿ ರಂಜಾನ್, ಬಸವ ಜಯಂತಿ ಆಚರಣೆ – ಬಸವಣ್ಣ, ಮಹಮ್ಮದ್ ಪೈಗಂಬರ್‌ಗೆ ಜಯಘೋಷ
Advertisement
Advertisement
ಸಂಸದ ರಮೇಶ ಜಿಗಜಿಣಗಿ ಶೂ ಧರಿಸಿ ಪೂಜೆಯಲ್ಲಿ ಪಾಲ್ಗೊಂಡರು. ಅಲ್ಲದೆ ಹಲವರು ಚಪ್ಪಲಿ, ಶೂ ಧರಿಸಿ ಪೂಜೆ ನೆರವೇರಿಸಿದರು. ಶೂ ಧರಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದ ರಮೇಶ ಜಿಗಜಿಣಗಿ ಕ್ಯಾಮೆರಾ ನೋಡುತ್ತಿದಂತೆ ಸ್ವಲ್ಪ ಸಮಯದ ನಂತರ ಹೊರಗಡೆ ಹೋಗಿ ಶೂ ತೆಗೆದು ಬಂದರು. ಆದರೆ ಇನ್ನೂ ಕೆಲವರು ಶೂ, ಚಪ್ಪಲಿ ಧರಿಸಿಯೇ ಆರತಿ ಬೆಳಗಿದರು.