– ಲಾಠಿ ಚಾರ್ಜ್ ವೇಳೆ 12 ಮಂದಿ ಪೊಲೀಸರು, 6 ಹೋರಾಟಗಾರರಿಗೆ ಗಾಯ
– ಇದು ಲಿಂಗಾಯತರ ಮೇಲೆ ಲಾಠಿ ಚಾರ್ಜ್ ಮಾಡಿದ ಏಕೈಕ ಸರ್ಕಾರ ಎಂದು ಆರೋಪ
ಬೆಳಗಾವಿ: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಪಂಚಮಸಾಲಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು ಪ್ರತಿಭಟನಾಕಾರರ (Protester) ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ 12 ಮಂದಿ ಪೊಲೀಸರು ಹಾಗೂ 6 ಮಂದಿ ಹೋರಾಟಗಾರರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಬೆಳಗಾವಿ (Belagavi) ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಪೊಲೀಸರ ಲಾಠಿ ಚಾರ್ಜ್ ಕುರಿತು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಮಾಧ್ಯಮಗಳೊಂದಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಮಾತನಾಡಿದರು. 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹೈಟೆಕ್ ಜಿಮ್, ಸ್ಪಾ – ಕೇಜ್ರಿವಾಲ್ ಮನೆ ಭ್ರಷ್ಟಾಚಾರದ ಮ್ಯೂಸಿಯಂ; ವೀಡಿಯೋ ಸಹಿತ ಬಿಜೆಪಿ ಆರೋಪ
ಸಿಎಂ ಮೇಲೆ ಅನುಮಾನ
ಪಂಚಮಸಾಲಿ ಹೋರಾಟ ಶಾಂತಿಯುತವಾಗಿತ್ತು, ಸ್ಥಳಕ್ಕೆ ಸಿಎಂ ಬರಬೇಕು ಅಂತಾ ಆಗ್ರಹ ಇತ್ತು. ಆದ್ರೆ ಸ್ಥಳಕ್ಕೆ ಬಂದ ಸಚಿವರ ಮಾತು ಸಮಾಧಾನ ತರಲಿಲ್ಲ. ಹಾಗಾಗಿ ನಾವು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹೋರಟಿದ್ವಿ. ಆದ್ರೆ ಅಲ್ಲಿದ್ದ ಎಡಿಜಿಪಿ, ಕಮಿಷನರ್ ಕುತಂತ್ರದಿಂದ ಲಾಠಿ ಚಾರ್ಜ್ ಮಾಡಿದರು. ಲಾಠಿ ಚಾರ್ಜ್‌ನಿಂದ ಬಹಳಷ್ಟು ಜನರಿಗೆ ಕೈಕಾಲು ಮುರಿದಿದೆ. ಮುಖ್ಯಮಂತ್ರಿಗಳೇ ಹೇಳಿ ಇದನ್ನು ಮಾಡಿಸಿದ್ದಾರಾ ಅನ್ನೋ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದು ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಏಕೈಕ ಸರ್ಕಾರ. ಅವರ ಪಿತೂರಿ ನೋಡಿದ್ರೇ ಗೋಲಿಬಾರ್ ಮಾಡ್ತಿದ್ರೂ ಅನ್ಸತ್ತೆ. ಲಿಂಗಾಯತರಿಗೆ ಮೀಸಲಾತಿ ಕೊಡಲ್ಲ ಅಂತಾ ಇವತ್ತೇ ಹೇಳಲಿ, 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ ಎಂದರಲ್ಲದೇ ಗುರುವಾರ (ಡಿ.12) ರಾಜ್ಯದ ಜನರು ನಿಮ್ಮ ಹಳ್ಳಿ, ತಾಲೂಕು, ಜಿಲ್ಲಾ ರಸ್ತೆ ಬಂದ್ ಮಾಡಿ ಹೋರಾಟ ಮಾಡಿ ಎಂದು ಕರೆ ನೀಡಿದರು. ಇದನ್ನೂ ಓದಿ: ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ
ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಎಡಿಜಿಪಿ ಮತ್ತು ಕಮಿಷನರ್ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು. ಗಾಯಗೊಂಡವರನ್ನ ಭೇಟಿಯಾಗಿ ಅವರ ಚಿಕಿತ್ಸೆ ವೆಚ್ಚ ಭರಿಸುತ್ತೇವೆ. ನಿಮಗೆ ಅನ್ಯಾಯ ಮಾಡಿ ದೌರ್ಜನ್ಯ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡ್ತೇವಿ. ಮುಂದಿನ ಹೋರಾಟವನ್ನ ಪ್ರಕಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್