ವಿಜಯಪುರ: ಹೊಸ ಪಕ್ಷ ಕಟ್ಟೋಕೆ ನಮ್ಮಲ್ಲಿ ರೊಕ್ಕ ಇದೇವಾ? ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದೆವು, ಎಂದು ಹೊಸ ಪಕ್ಷ ಕಟ್ಟುವ ಚರ್ಚೆ ವಿಚಾರಕ್ಕೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದವು. ಮೂಲತಃ ನಾವು ಬಿಜೆಪಿ ಕಟ್ಪಿದವರು. ನಮಗೇನು ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟುವ ಚಟವಿಲ್ಲ. ಅಷ್ಟು ಶಕ್ತಿಯೂ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ನಾವು ರಮೇಶ್ ಜಾರಕಿಹೊಳಿ ಮುಂದೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಬಗ್ಗೆ ಚರ್ಚಿಸಿದ್ದೇವೆ. ದೇವರ ಸಾಕ್ಷಿಯಾಗಿ ನಾವು ಹೊಸ ಪಕ್ಷ ಕಟ್ಟುವ, ಬ್ಲ್ಯಾಕ್ ಮೇಲ್ ಮಾಡೋದಿಲ್ಲ. ನಮ್ಮ ಪಕ್ಷದಲ್ಲಿ ನಮ್ಮ ನಾಯಕರ ವಿಶ್ವಾಸ ಇದೆ. ಸಿಎಂ, ರಾಜ್ಯಾಧ್ಯಕ್ಷರು ನನ್ನ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ವಿಜಯಪುರ ಜಿಲ್ಲೆ ಮಂತ್ರಿ ಸ್ಥಾನದಿಂದ ವಂಚಿತವಾಗಿದೆ. ಈ ಬಾರಿ ನೂರಕ್ಕೆ ನೂರು ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುತ್ತೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: UP ಎಲೆಕ್ಷನ್: ಕಾಂಗ್ರೆಸ್ 4ನೇ ಪಟ್ಟಿ ಪ್ರಕಟ 24 ಮಹಿಳೆಯರಿಗೆ ಅವಕಾಶ
Advertisement
ನಾನು ನಿರಾಣಿ,ಪರಾಣಿಗೆ ಅಂಜಿ ರಾಜಕಾರಣ ಮಾಡುವವನಲ್ಲ. ನಿರಾಣಿಯನ್ನು ಬಿಜೆಪಿಗೆ ತಂದು ಟಿಕೆಟ್ ಕೊಡಿಸಿದ್ದು ನಾನು. ಅವನಿಗೇಕೆ ನನ್ನ ಹೋಲಿಸ್ತಿರಿ ಎಂದು ನಿರಾಣಿಗೆ ಏಕವಚನದಲ್ಲಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 23 ಕಿಮೀ ಅನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ಜೀವ ಉಳಿಸಿದ ಆಂಬುಲೆನ್ಸ್