– ಸಿದ್ದರಾಮಯ್ಯ ನಕ್ಸಲರಿಗೆ ಶರಣಾಗಿದ್ದಾರೆ
ವಿಜಯಪುರ: ಸಿದ್ದರಾಮಯ್ಯ (Siddaramaiah) ನಕ್ಸಲರಿಗೆ ಶರಣಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.
Advertisement
ವಿಜಯಪುರದಲ್ಲಿ ನಕ್ಸಲರ ಶರಣಾಗತಿ ಬಗ್ಗೆ ಅವರು ಮಾತನಾಡಿದರು. ಈ ವೇಳೆ, ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು. ಈ ನಕ್ಸಲರಿಂದ ಎಷ್ಟು ಪೊಲೀಸ್ ಅಧಿಕಾರಿಗಳು ಪ್ರಾಣ ಕೊಟ್ಟಿದ್ದಾರೆ. ಎಷ್ಟೋ ರೈತರ, ಸಾಮಾನ್ಯ ಜನರ ಹತ್ಯೆ ಮಾಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕು ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಅವರು ಎಲ್ಲೆಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ಅವುಗಳನ್ನು ಮುಂದಿಟ್ಟು ಶರಣಾಗಬೇಕಿತ್ತು. ಆದರೆ ಸಿದ್ಧರಾಮಯ್ಯ ಅವರೇ ನಕ್ಸಲರಿಗೆ ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಇವತ್ತು ಶರಣಾಗಿ ನಾಳೆ ಶಸ್ತ್ರಾಸ್ತ್ರಗಳನ್ನು ತಂದು ಕೊಡಿ ಎಂದು ಹೇಳಿರಬೇಕು. ಮುಂದಿನ ದಿನಗಳಲ್ಲಿ ಇದೊಂದು ಸ್ಟೈಲ್ ಆಗುತ್ತದೆ. ಕೆಲ ದಿನ ಬಂದೂಕು ಹಾಕಿಕೊಂಡು ಓಡಾಡುತ್ತಾರೆ. ನಂತರ 6 ತಿಂಗಳು ಮಾಯ ಆಗುತ್ತಾರೆ. ಬಳಿಕ ಶರಣಾಗುತ್ತಾರೆ. ಅವರಿಗೆಲ್ಲ ವಿಶೇಷ ಪ್ಯಾಕೇಜ್ ಕೊಡುತ್ತೀರಾ? ಹಾಗಾದರೆ ಪೋಲಿಸರ ಕುಟುಂಗಳಿಗೆ ಏನು ಹೇಳ್ತಿರಿ? ಅವರಿಂದ ಹತ್ಯೆಯಾದ ಪೊಲೀಸರು, ನಾಗರಿಕರಿಗೆ ಏನು ಕೊಟ್ಟಿದ್ದೀರಿ? ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕಾನೂನು ಪ್ರಕಾರ ಬರಬೇಕು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ರಾಜ್ಯದ ಗೃಹ ಮಂತ್ರಿಗಳಿಗೆ (G.Paramshwar) ಸುವರ್ಣಸೌಧದಲ್ಲಿ ಸಿ.ಟಿ ರವಿ (C.T Ravi) ಅರೆಸ್ಟ್ ಬಗ್ಗೆ ಗೊತ್ತಿರಲಿಲ್ಲ. ಲಿಂಗಾಯತ ಪಂಚಮಸಾಲಿ ಹೋರಾಟದ ವೇಳೆ ಸುವರ್ಣಸೌಧಕ್ಕೆ ಪ್ರತಿಭಟನಾಕಾರರು ನುಗ್ಗಬೇಕು ಎಂದು ಇದ್ದರು. ಅದಕ್ಕೆ ಲಾಠಿ ಚಾರ್ಚ್ ಮಾಡಿದ್ದೀವಿ ಎಂದು ಹೇಳಿ, ಅವರಿಗೇನು ಮುತ್ತು ಕೊಡಬೇಕಾ? ಎಂದು ಕೇಳಿದ್ದರು. ನಮಗೆ ಕೊಡಬೇಡಿ ಕೇವಲ ಸಾಬ್ರಿಗೆ ಮುತ್ತು ಕೊಡಿ. ಕೆಜಿ ಹಳ್ಳಿಯಲ್ಲಿ ಬೆಂಕಿ ಹಚ್ಚಿದವರಿಗೆ ಮುತ್ತು ಕೊಡಿ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಮುತ್ತು ಕೊಡಿ. ಮುತ್ತು ಕೊಡುವ ಗೃಹ ಮಂತ್ರಿಗಳಾಗಲಿ ಎಂದು ವಾಗ್ದಾಳಿ ನಡೆಸಿದರು.