ವಿಜಯಪುರ: ಸರ್ಕಾರ ಧ್ವನಿವರ್ಧಕ ವಿಷಯದಲ್ಲಿ ಕ್ರಮಗೈಗೊಳ್ಳದಿದ್ದರೆ ಸಂಘರ್ಷಕ್ಕೆ ದಾರಿ ಆಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸರ್ಕಾರಕ್ಕೆ ಧ್ವನಿವರ್ಧಕ ವಿಚಾರದಲ್ಲಿ ಕಠಿಣ ಕ್ರಮ ತಗೆದುಕೊಳ್ಳಲು ಧಮ್ಮಿಲ್ಲ ಎಂಬ ಮುತಾಲಿಕ್ ಹೇಳಿಕೆ ವಿಚಾರವಾಗಿ ನಗರದ ಹಿಟ್ನಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಏಕೆ ಸುಮ್ಮನಿದ್ದಾರೆ ಗೊತ್ತಿಲ್ಲ. ಸುಪ್ರೀಂಕೋರ್ಟ್ ಸೂಚಿಸಿರುವುದನ್ನು ಜಾರಿ ಮಾಡುವುದಷ್ಟೇ ಇದೆ. ಪ್ರಮೋದ್ ಮುತಾಲಿಕ್ ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್
ತಕ್ಷಣ ಗೃಹಮಂತ್ರಿಗಳಿಗೆ ಸಿಎಂ ಆದೇಶ ಮಾಡಬೇಕು. ನಾಳೆಯಿಂದ ಎಲ್ಲ ಕಡೆ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿರುವುದಕ್ಕಷ್ಟೆ ಬಿಡಬೇಕು. ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಅವರು ತೆಗೆದು ಹಾಕುತ್ತಾರೆ. ಇಲ್ಲವಾದರೆ ಇದು ಮೊತ್ತೊಂದು ಸಂಘರ್ಷಕ್ಕೆ ಹಾದಿ ಆಗುತ್ತೆ ಎಂದರು. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಪತ್ನಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್