ಬೆಂಗಳೂರು: ಇದು ಮುಸ್ಲಿಮರ ಪರವಾಗಿ ಇರುವ (Karnataka Budget 2025) ಬಜೆಟ್, ಮುಸ್ಲಿಂ ಹೆಣ್ಣು ಮಕ್ಕಳನ್ನು ಹಿಂದೂ ಹೆಣ್ಣುಮಕ್ಕಳ ವಿರುದ್ಧ ತಿರುಗಿ ಬೀಳುವಂತೆ ಮಾಡಲು ಆತ್ಮರಕ್ಷಣೆಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಬರಿ ವಕ್ಫ್‌ಗೆ ಕಾಂಪೌಂಡ್ ಕಟ್ಟೋಕೆ 150 ಕೋಟಿ ಕೊಟ್ಟಿದ್ದಾರೆ. ಅಲ್ಲದೇ ಸಾವಿರಾರು ಕೋಟಿ ಹಣ ಮೀಸಲಿಟ್ಟಿದ್ದಾರೆ ಎಂದು ಬಜೆಟ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಯತ್ನಾಳ್ ಕಿಡಿಕಾರಿದ್ದಾರೆ.
ಮದರಸಾದಲ್ಲಿ ಧರ್ಮ ಬಿಟ್ಟು ಬೇರೆ ಏನು ಹೇಳಿಕೊಡಲ್ಲ, ಅಲ್ಲಿಗೆ ಕಂಪ್ಯೂಟರ್ ಕೊಟ್ಟಿದ್ದಾರೆ. ಅವರ ಪುರಾಣದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತತ್ತೋ, ಸೂರ್ಯ ಭೂಮಿ ಸುತ್ತ ಸುತ್ತತ್ತೋ? ಆ ವಿಚಾರವೇ ಅವರಿಗೆ ಗೊತ್ತಿಲ್ಲ. ಮತಾಂದರನ್ನ ಸೃಷ್ಠಿ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡಲು ಹೊರಟಿದ್ದಾರೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಇದನ್ನು ವಿಧಾನಸಭೆಯಲ್ಲಿ ಸರ್ಕಾರದ ಗಮನಕ್ಕೆ ತರುತ್ತೇವೆ. ಈ ನಿರ್ಧಾರ ಕೈಬಿಡದಿದ್ದರೆ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಉತ್ತರ ಕರ್ನಾಟಕದ ನೀರಾವರಿ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಚರ್ಚೆ ಆಗಿಲ್ಲ. ಕೃಷ್ಣೆಗೆ ಮೋಸ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ನೀರಾವರಿ ಬಗ್ಗೆ ಯಾವ ಚರ್ಚೆ ಆಗಿಲ್ಲ. ಒಂದೇ ಸಾಲಲ್ಲಿ ಬಜೆಟ್ ಬಗ್ಗೆ ಹೇಳ್ಬೇಕು ಅಂದ್ರೆ, ಇದು ಸಾಬ್ರ ಬಜೆಟ್, ಪಾಕಿಸ್ತಾನದ ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ.