ಧಾರವಡ: ಮೇಕೆದಾಟು ಪಾದಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ ಡಿ.ಕೆ. ಶಿವಕುಮಾರ್ ಅವರು ಓಲಾಡುತ್ತಾ ಹೊರಟಿದ್ದರು, ಯಾಕೆ ಯಾವ ಮಾಧ್ಯಮವೂ ವಿಶೇಷ ವರದಿ ಮಾಡಿಲ್ಲ. ಒಂದು ತಾಸಿನ ವಿಶೇಷ ಕಾರ್ಯಕ್ರಮ ಮಾಡಬೇಕಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ವಿರುದ್ಧವಾಗಿ ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಡಿಕೆಶಿ ಪೂಜೆ ಮಾಡಲು ಹೋಗಿ ಬಿದ್ದಿದ್ದರು, ಅದನ್ನು ತೋರಿಸಿದ್ರಿ, ಆದರ ಆ ಬಗ್ಗೆ ಮಾಧ್ಯಮಗಳಲ್ಲಿ ವಿಶ್ಲೇಷಣೆ ಮಾಡಲೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್
Advertisement
Advertisement
ಅವರೆಲ್ಲ ಶ್ರೀಮಂತರು ದೊಡ್ಡ ರಾಜಕಾರಣಿಗಳು, ಐವತ್ತು ವರ್ಷದಿಂದ ಲೂಟಿ ಮಾಡಿದವರು. 2023ಕ್ಕೆ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಸದ್ಯ ಪಂಚರಾಜ್ಯ ಚುನಾವಣೆ ನಡೆದಿದೆ. ಸ್ವಲ್ಪ ಹೆಚ್ಚು ಕಡಿಮೆ ಆಗಲಿದ್ದು, ಒಟ್ಟಾರೆ ಒಳ್ಳೆ ದಿನಗಳು ಬರಲಿವೆ ಎಂದು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ತಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ನಿಧನ
Advertisement
Advertisement
ನಾನಂತೂ ಯಾವುದೇ ಅಪೇಕ್ಷೇ ಮಾಡಿಲ್ಲ, ಆದರೂ ನಮ್ಮನ್ನೂ ಸೇರಿಯೇ ಒಳ್ಳೆ ದಿನ ಬರಲಿದೆ. ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತಿದೆ. ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ, ಒಮ್ಮೊಮ್ಮೇ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡಿತ್ತೇನಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಮಚಾಗಿರಿ ಮಾಡಲ್ಲ, ಅದಕ್ಕೆ ರಾಜಕೀಯದಲ್ಲಿ ಹಿಂದೆ ಇದ್ದೇನೆ: ಯತ್ನಾಳ್