BelgaumDistrictsKarnatakaLatestLeading NewsMain Post

ಭೋಗದ ವಸ್ತು ನೀಡೋರನ್ನ ಸಿಎಂ ಮಾಡಲ್ಲ, ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ: ಯತ್ನಾಳ್

ಬೆಳಗಾವಿ: ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ಸಚಿವ ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟಾಂಗ್ ನೀಡಿದ್ದಾರೆ.

ಈಶ್ವರಪ್ಪ, ಯತ್ನಾಳ್, ನಿರಾಣಿ ಸಂಧಾನ ಸಭೆ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಖಾಸಗಿ ಹೋಟೆಲ್‍ನಲ್ಲಿದ್ದಾರೆ. ಸಿಎಂ ಆಗುತ್ತೇನೆ ಎಂದು ಯಾರ್‍ಯಾರೋ ಹಗಲುಗನಸು ಕಾಣುತ್ತಿದ್ದಾರೆ. ಸೂಟು ಹೊಲಿಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಡುತ್ತಾರೆ. ನಾನು ರಿಸರ್ವ್ ಮಾಡಿದ್ದೇನೆ, ಬುಕ್ ಮಾಡಿದ್ದೇನೆ ಅಂತಿದ್ದಾರೆ. ಜನವರಿ 2ನೇ ವಾರದಲ್ಲಿ ಸಿಎಂ ಆಗುತ್ತೇನೆಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಅವರ ಆಸೆಗಳು ಈಡೇರುವುದಿಲ್ಲ. ಸದ್ಯ ಸಿಎಂ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತೆ: ವಿ. ಸೋಮಣ್ಣ

basavaraj bommai

ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ದೊಡ್ಡ, ದೊಡ್ಡ ಸಂಧಾನ ಮಾಡುತ್ತಿರುವುದು ನಿಜ. ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎಂದು ನನಗೆ ಆಮಿಷ ಒಡ್ಡುತ್ತಿದ್ದಾರೆ. ಆದರೆ ಇಂತವರನ್ನು ಒಪ್ಪಿಕೊಳ್ಳುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

Leave a Reply

Your email address will not be published.

Back to top button