ದಾವಣಗೆರೆ: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಹಾಗೂ ಈಗ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ (By Election) ಬಿಜೆಪಿ (BJP) ಸೋಲಿಗೆ ಯತ್ನಾಳ್‌ನ (Basangouda Patil Yatnal) ಹರಕು ಬಾಯಿಯೇ ಕಾರಣ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನ ಬೆಳಗಾದರೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸುತ್ತಾರೆ. ಬಸನಗೌಡ ಯತ್ನಾಳ್ ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ನೇರ ಕಾರಣ. ರಾಜ್ಯದ ಜನ ಬಿವೈ ವಿಜಯೇಂದ್ರ ಅವರ ನಾಯಕತ್ವ ಒಪ್ಪಿದ್ದಾರೆ. ಇದೇ ಕಾರಣ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಗಾಳಿ ಇದ್ದರೂ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂದರು. ಇದನ್ನೂ ಓದಿ: ಮೊಬೈಲ್ ನೋಡ್ತಾ ಮನೆಮುಂದೆ ಕೂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ – 2 ಕಾಲುಗಳು ಕಟ್
ವಕ್ಫ್ ವಿರುದ್ಧ ಹೋರಾಟಕ್ಕೆ ನೇಮಕವಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ವಿಜಯೇಂದ್ರ ಈ ಮೂರು ತಂಡಗಳು ಮಾತ್ರ ಅಧಿಕೃತ. ಯತ್ನಾಳ್ ತಂಡಕ್ಕೆ ಯಾರು ಬೆಲೆ ಕೊಡಬೇಡಿ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅಧ್ಯಕ್ಷ ಸ್ಥಾನ ಬದಲಾಗಲ್ಲ. ಬರುವ ವಿಧಾನಸಭೆ ಚುನಾವಣೆ ವಿಜಯೇಂದ್ರ ನೇತ್ರತ್ವದಲ್ಲಿಯೇ ಎದುರಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಾಮಾ ಮಸೀದಿ ಸರ್ವೇಗೆ ವಿರೋಧ – ಹಿಂಸಾಚಾರದಲ್ಲಿ ಮೂವರು ಸಾವು, 20 ಪೊಲೀಸರಿಗೆ ಗಾಯ