– ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ರೆ ಮೂತ್ರ ವಿಸರ್ಜನೆಗೂ ಬಿಡ್ತಿರಲಿಲ್ಲ
– ಮೀಸಲಾತಿ ಕೊಡ್ತೀರೋ ಇಲ್ವೋ, ತಾಯಿ ಮೇಲೆ ಗೌರವ ಇದ್ರೆ ಆಣೆ ಮಾಡಿ ಹೇಳಿ
ಬೆಳಗಾವಿ: ಪಂಚಮಸಾಲಿ (Panchamasali) ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಡ್ತಿರೋ ಇಲ್ವೋ ಅನೋದನ್ನ ಸಿಎಂ ಬೊಮ್ಮಾಯಿ (Basavaraj Bommai) ಅವರು ತಾಯಿ ಆಣೆ ಮಾಡಿ ಹೇಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಪಟ್ಟು ಹಿಡಿದಿದ್ದಾರೆ.
ನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ತಾಯಿ ಆಣೆ ಮಾಡಿ, ತಾಯಿಯ ಮೇಲೆ ಗೌರವ ಇದ್ದರೆ, 24 ತಾಸಿನಲ್ಲಿ ಆಣೆ ಮಾಡಿ ಹೇಳಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ: ಜಯಮೃತ್ಯುಂಜಯ ಸ್ವಾಮೀಜಿ
ನಾವು ಧಮ್ಕಿ ಹಾಕಿ ಮೀಸಲಾತಿ ಕೇಳ್ತಿಲ್ಲ. ಧಮ್ಕಿ ಹಾಕಿದ್ದರೆ ಸುವರ್ಣ ಸೌಧಕ್ಕೇ ಮುತ್ತಿಗೆ ಹಾಕುತ್ತಿದ್ವಿ. ನಿಮ್ಮನ್ನ ಮೂತ್ರ ವಿಸರ್ಜನೆಗೂ ಬಿಡುತ್ತಿರಲಿಲ್ಲ. ಏನೂ ಮಾಡದೇ ಧಮ್ಕಿ ಅಂತಾ ಅಪವಾದ ಕೊಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2d ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ
ಬೊಮ್ಮಾಯಿ ಸಿಎಂ ಆದಾಗಿನಿಂದಲೂ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸವಾಗ್ತಿದೆ. ಬೆಳಗಾವಿ ಅಧಿವೇಶನದಲ್ಲಿ (Belagavi Session) ಸಿಎಂ ಮೀಸಲಾತಿ ನೀಡುವ ಭರವಸೆ ಕೊಟ್ಟರು. ವರದಿ ಕೊಡು ಪುಣ್ಯಾತ್ಮ ಅಂದ್ರೆ ಮಳೆ ಐತಿ, ಕೊರೊನಾ ಐತಿ ಅಂತಾ ನೆಪ ಹೇಳಿದ್ರು. ಇದರ ಹಿಂದೆ `ಶಿಕಾರಿಪುರ ರಾಜ’ ಇದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ (BS Yediyurappa) ವಿರುದ್ಧ ಕಿಡಿ ಕಾರಿದ್ದಾರೆ.
ನಿಮ್ಮ ಮಂತ್ರಿಗಳಿಗೆ 2ಡಿ ಮೀಸಲಾತಿ ಅಂದ್ರೆ ಗೊತ್ತಿಲ್ಲ. ಸಮಾಜಕ್ಕೆ ಇನ್ನೊಬ್ಬ ಮಂತ್ರಿ ಮಾಡೋದು ಬೇಕಿಲ್ಲ. ಬರೀ ರೊಕ್ಕ ಬೇಕು. ಬೊಮ್ಮಾಯಿಯವರೇ ನಿಮ್ಮನ್ನ ನಂಬಿದ್ದಕ್ಕೆ ಈ ಕಾಣಿಕೆ ಕೊಟ್ಟಿದ್ದೀರಿ. ಬೊಮ್ಮಾಯಿ ನಂಬಬೇಡ್ರಿ ಅಂತಾ ಹಲವು ಜನ ಹೇಳಿದ್ರು. ನಾವು ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರೆ ಅಂದೇ ನಿಮ್ಮ ಕೊನೆ ದಿವಸ ಆಗ್ತಿತ್ತು. ನೀವು ತಾಯಿ ಆಣೆ ಕೊಟ್ಟಿದ್ದಿರಿ ಅಂತಾ ನಾವು ಒಪ್ಪಿದ್ದೇವು. ನೀವು ಟಿಕೆಟ್ ನೀಡದೇ ಇರಬಹುದು ಇಲ್ಲ ಪಕ್ಷದಿಂದ ಉಚ್ಛಾಟಿಸಬಹುದು. ಆದ್ರೆ ಶಿಕಾರಿಪುರ ರಾಜನ ಕೇಳಿ ಆಟ ಆಡಿದ್ರೆ ಶಿಕಾರಿಪುರದ ರಾಜನೂ ಹೋಗ್ತಾನೆ, ನೀವು ಹೋಗ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k