ತನ್ವೀರ್ ಪೀರಾ ಸಂಬಂಧಿ ಜೊತೆ ಯತ್ನಾಳ್ ವ್ಯವಹಾರ – ದಾಖಲೆ ಬಿಡುಗಡೆ

Public TV
1 Min Read
Basangouda Patil Yatnal business with Maulvi Tanveer Peer family Document release

ಧಾರವಾಡ: ಮೌಲ್ವಿ ತನ್ವೀರ್ ಪೀರಾ (Maulvi Tanveer Peer) ಜೊತೆ ಯಾವುದೇ ವ್ಯವಹಾರ ಹೊಂದಿಲ್ಲ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಇಲ್ಲಿನ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೀರಾ ಸೋದರ ಮಾವನೊಂದಿಗೆ ಯತ್ನಾಳ್ ಅವರ ವ್ಯವಹಾರದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ವಿಜಯಪುರದ ಎಂ.ಜಿ ರಸ್ತೆಯ ವಾರ್ಡ್ ನಂ.3ರಲ್ಲಿ ಹೋಟೆಲ್ ಟೂರಿಸ್ಟ್ ಕಟ್ಟಿದ್ದಾರೆ. ಇದನ್ನು ಎಂ.ಎಂ ಪೀರಜಾದೆ ಹಾಗೂ ಯತ್ನಾಳ್ ಒಡೆತನದಲ್ಲಿ ಕಟ್ಟಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ – ಆಸ್ತಿ ವಿಚಾರಕ್ಕೆ ಮಗನಿಂದ ಹತ್ಯೆ ಶಂಕೆ

ಪೀರಜಾದೆಯವರು ಪೀರಾ ಅವರ ತಾಯಿಯ ಸಹೋದರರಾಗಿದ್ದು, ಅವರೊಂದಿಗೆ ಯತ್ನಾಳ್ ಅವರಿಗೆ 30-40 ವರ್ಷಗಳ ವ್ಯವಹಾರಿಕ ಸಂಬಂಧವಿದೆ. ಪೀರಾ ಹಾಗೂ ಪೀರಜಾದೆ ಎಲ್ಲರೂ ಸೇರಿ ವ್ಯವಹಾರ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಟ್ವೀಟ್ ಮಾಡಿದ್ದರು. ಇದಕ್ಕೆ ಯತ್ನಾಳ್ ಅವರು ಮರು ಟ್ವೀಟ್ ಮಾಡಿ ಪೀರಾ ಅವರೊಂದಿಗೆ ಯಾವುದೇ ವ್ಯವಹಾರ ಹೊಂದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ತಮಟಗಾರ್ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನನ್ನ, ಸಿದ್ದರಾಮಯ್ಯ ನಡುವೆ ಅಸಮಾಧಾನವಿಲ್ಲ, ಅವರಿಗೆ ಸಿಎಂ ಆಗುವ ಅದೃಷ್ಟ ಇತ್ತು: ಬಿ.ಕೆ ಹರಿಪ್ರಸಾದ್

Share This Article