ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಆನಂದ್ ಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
Advertisement
ಸೋಮವಾರ ಡಿಕೆಶಿ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಭೇಟಿ ನೀಡಿದ್ದರು. ಈ ಕುರಿತಂತೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್ ಅವರು, ಸಚಿವ ಆನಂದ್ ಸಿಂಗ್ ನೇರಾ, ನೇರ ವ್ಯಕ್ತಿತ್ವ ಉಳ್ಳವರು. ಅಭಿವೃದ್ದಿ ವಿಚಾರವಾಗಿ ಹೋಗಿದ್ದಾರೋ ಏನೋ ಎಂಬುದು ನನಗೆ ಗೊತ್ತಿಲ್ಲ. ಆನಂದ್ ಸಿಂಗ್ ಡಿಕೆಶಿ ಭೇಟಿ ಕುರಿತು ನನಗೆ ಏನೂ ತಿಳಿದಿಲ್ಲ. ವಿಜಯನಗರ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಆನಂದ್ ಸಿಂಗ್ ಬೇಸರಗೊಂಡಿದ್ದಾರೆ. ನೂತನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ಮಾಡಬೇಕೆಂದು ಆಸೆ ಹೊಂದಿದ್ದರು. ಪಕ್ಷದ ಚೌಕಟ್ಟಿನಲ್ಲಿ ಆಯಾ ಜಿಲ್ಲೆಯ ಸಚಿವರು ಜಿಲ್ಲಾ ಉಸ್ತುವಾರಿ ಬೇಡವೆಂದು ಪಕ್ಷ ತೀರ್ಮಾನಿಸಿದೆ. ಆ ಕಾರಣದಿಂದ ವಿಜಯನಗರ ಉಸ್ತುವಾರಿ ಸ್ಥಾನ ಆನಂದ್ ಸಿಂಗ್ ಅವರಿಗೆ ತಪ್ಪಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಅವರ ಬಗ್ಗೆ ಗೌರವಿದೆ, ಅವರೊಬ್ಬ ಒಳ್ಳೆಯ ಮನುಷ್ಯ. ಹಿಂದೆ ಮುಂದೆ ಮಾಡುವ ಮನುಷ್ಯರಲ್ಲ. ಡಿಕೆಶಿ ಹಾಗೂ ಆನಂದ್ ಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ. ಆನಂದ್ ಸಿಂಗ್ ಬಿಜೆಪಿ ಬಿಟ್ಟು ಹೋಗಲ್ಲ ಎನಿಸುತ್ತಿದೆ. ಬಿಜೆಪಿ ಬಿಟ್ಟು ಹೋಗುವವರ ಲಿಸ್ಟ್ ನಲ್ಲಿ ಆನಂದ್ ಸಿಂಗ್ ಇಲ್ಲ. ಅವರ ಮನಸ್ಸಿಗೆ ಬೇಜಾರಾಗಿ ಡಿಕೆಶಿ ಭೇಟಿ ಮಾಡಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‍ನ ಭಸ್ಮಾಸುರ. ಅಹಿಂದ ನಾಯಕರನ್ನು ಸ್ವಜಾತಿಯ ನಾಯಕರನ್ನಾಗಿ ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ಮುಗಿಸಲು ಕಾಂಗ್ರೆಸ್‍ನಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಡಿಕೆಶಿ ಮೊದಲ ಅಜೆಂಡಾ ಸಿದ್ದರಾಮಯ್ಯರನ್ನು ಮುಗಿಸೋದು. ಸಿದ್ದರಾಮಯ್ಯ ಬಲಿಷ್ಟವಾಗಿದ್ದರೆ ಡಿಕೆಶಿ ಸಿಎಂ ಆಗಲು ಸಾಧ್ಯವಿಲ್ಲ. ಮೇಕೆದಾಟು ಪಾದಯಾತ್ರೆಯ ವೇಳೆ ತಮ್ಮನ್ನು ತಾವು ಹೊಗಳಿ ಕೊಳ್ಳುವ ಕೆಲಸ ಡಿಕೆಶಿ ಮಾಡಿದ್ದಾರೆ. ಪಾದಯಾತ್ರೆ ಜನರಿಗಾಗಿ ಅಲ್ಲ ಎಂದು ಪುನರುಚ್ಛಾರ ಮಾಡಿದರು. ರಾಜ್ಯದ ನಾಯಕತ್ವವನ್ನು ಸಿದ್ದರಾಮಯ್ಯರಿಂದ ಕಸಿದುಕೊಂಡು, ಏಕೈಕ ನಾಯಕನೆಂದು ತೋರಿಸಲು ಪ್ರಯತ್ನಿಸಿದ್ದಾರೆ. ಅದರ ಬದಲಾಗಿ ಇಡೀ ರಾಜ್ಯದಲ್ಲಿ ಕೊರೊನಾ ಹರಡಲು ಕಾರಣವಾದರು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Union Budget: ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ: ರಣದೀಪ್ ಸುರ್ಜೇವಾಲಾ ವ್ಯಂಗ್ಯ
ಡಿಕೆಶಿ ಬಹುಕೋಟಿ ರೂಪಾಯಿ ಹಗರಣ ವಿಚಾರ: ಯಾರೇ ಆರೋಪಿಗಳಾಗಿರಬಹುದು, ಅದರಲ್ಲಿಯೂ ಇಡಿಗೆ ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗುವುದಿಲ್ಲ. ಇಡಿ ಒಳಗೆ ಸಿಕ್ಕವರು ಹೀಗಿಲ್ಲದಿದ್ದರೂ, ಇನ್ನು ಹತ್ತು ವರ್ಷಕ್ಕೆ ನಿಶ್ಚಿತವಾಗಿ ಕ್ರಮ ಆಗೇ ಆಗುತ್ತದೆ. ಮೊನ್ನೆ ಒಬ್ಬ ಬಿಟಿಎಸ್ ಬಸ್ ಕಂಡೆಕ್ಟರ್ ಸಿಕ್ಕಿದ್ದಾರೆ. ಅವರ ಮನೆಯಲ್ಲಿ ಸಾವಿರಾರು ಕೋಟಿ ಸಿಕ್ಕಿದೆ. ಅದು ಯಾರ ದುಡ್ಡು?, ಅದು ಬಹಿರಂಗ ಆಗಬೇಕು. ಒಬ್ಬ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ದಾಖಲೆ ಸಿಗುತ್ತವೆ ಎಂದರೆ ಇಂತಹವರೆಲ್ಲಾ ಕಳ್ಳರು ಒಳಗೆ ಹೋಗಬೇಕು. ರಾಜ್ಯದ ಜನರ ಬೊಕ್ಕಸ ಲೂಟಿ ಮಾಡಿ, ದೇಶ, ವಿದೇಶದಲ್ಲಿ ಆಸ್ತಿ ಮಾಡುವ ರಾಜಕಾರಣಿಗಳಿಗೆಲ್ಲ ಶಿಕ್ಷೆ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅಲ್ಲದೇ ಪ್ರಧಾನಮಂತ್ರಿಗಳು ಅದನ್ನೇ ಹೇಳಿದ್ದಾರೆ. ನಾ ಖಾವುಂಗಾ, ನಾ ಖಿಲಾವುಂಗಾ ಎಂಬುವುದು ಮೋದಿ ಅವರ ಘೋಷವಾಕ್ಯವಾಗಿದೆ. ಅದರಂತೆ ಬಿಜೆಪಿ, ಕಾಂಗ್ರೆಸ್ ಅಥವಾ ಯಾವುದೇ ಪ್ರಕ್ಷದವರು ಇದ್ದರೂ ಒಳಗೆ ಹೋಗಬೇಕು ಎಂಬುದು ನನ್ನ ಸ್ಪಷ್ಟವಾದ ವೈಯಕ್ತಿಕ ನಿಲುವು ಎಂದರು.