ಬಾಗಲಕೋಟೆ: ಕಾಂಗ್ರೆಸ್ ಒಂದು ಹುಚ್ಚರ ಪಕ್ಷವಾಗಿದ್ದು, ರಾಹುಲ್ ಗಾಂಧಿ ದೊಡ್ಡ ಹುಚ್ಚನೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶನಿವಾರ ಯಾರೊ ಕಾಂಗ್ರೆಸ್ ಪಕ್ಷದವನೊಬ್ಬ ನನ್ನನು ಹುಚ್ಚ ಅಂದಿದ್ದಾನೆ. ಆದರೆ ಅವನಿಗೆ ಗೊತ್ತಿಲ್ಲ ಕಾಂಗ್ರೆಸ್ ಒಂದು ದೊಡ್ಡ ಹುಚ್ಚರ ಪಕ್ಷವಾಗಿದೆ. ಮುಸ್ಲಿಮರಿಗೆ ಹತ್ತು ಜನ ಮಕ್ಕಳನ್ನು ಹೆತ್ತರೂ ಯಾರೂ ಕೇಳಲ್ಲ, ಆದರೆ ಹಿಂದೂಗಳು ಕೇವಲ ಎರಡು ಮಕ್ಕಳನ್ನೇ ಹೆರಬೇಕಾಗಿದೆ ಎಂದು ಕಾರ್ಯಕರ್ತರಿಗೆ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿದರು.
Advertisement
ಚುನಾವಣೆಗಳು ಹತ್ತಿರ ಬರುತ್ತಿರುವಾಗ ರಾಹುಲ್ ಗಾಂಧಿಗೆ ಮಾನಸ ಸರೋವರ ನೆನಪಾಗಿದೆ. ಇಷ್ಟು ದಿವಸ ಕಾಂಗ್ರೆಸ್ಸಿನವರು ದೇವಸ್ಥಾನಗಳಿಗೆ ಹೋಗಿದ್ರಾ?, ಹಿಂದೂ ದೇವಾಲಯಗಳಿಗೆ ಹೋದವರನ್ನು ಕೋಮುವಾದಿಗಳೆಂದು ಅವರು ಪಟ್ಟ ಕಟ್ಟುತ್ತಿದ್ದರು. ಆ ಪುಣ್ಯಾತ್ಮ ಏನು ಮಾತನಾಡುತ್ತಾನೋ, ಏನು ಮಾಡುತ್ತಾನೋ ಅವನಿಗೆ ಗೊತ್ತಿಲ್ಲ. ಅಂತಹರನ್ನು ಪ್ರಧಾನಿ ಮಂತ್ರಿ ಮಾಡಲು ಹೋಗುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧ ಗಂಟೆಗಟ್ಟಲೇ ಭಾಷಣ ಮಾಡಿ, ಕೊನೆಗೆ ಅವರನ್ನೇ ತಬ್ಬಿಕೊಳ್ಳುತ್ತಾನೆ. ನನಗೆ ಅನಿಸುತ್ತೆ ಅವನ ತಲೆ ಕೆಟ್ಟುಹೋಗಿದೆ, ಹೀಗಾಗಿ ಆ ರೀತಿ ವರ್ತಿನಿಸಿದ್ದಾರೆ ಎಂದು ಏಕ ವಚನದಲ್ಲಿಯೇ ವ್ಯಂಗ್ಯವಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv