ಹಾವೇರಿ: ನಾನು ಭವಿಷ್ಯ ನುಡಿಯುತ್ತೇನೆ ಮುಂದಿನ ಮುಖ್ಯಮಂತ್ರಿ ನಮ್ಮ ಬಸನಗೌಡ ಪಾಟೀಲ್ ಯತ್ನಾಳ್. ಆ ಶಕ್ತಿ ಸಾಮರ್ಥ್ಯ ಅವರಲ್ಲಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
Advertisement
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಮುಂದಿನ ಶಾಸಕರು ಯಾರು ಅಂದ್ರೆ ಅದು ಪಂಚಮಸಾಲಿ ಸಮಾಜದವರು ಆಗಿರಬೇಕು. ನೀವು ಮನಸ್ಸು ಮಾಡಿದ್ರೆ ಇಲ್ಲಿಂದ ನಮ್ಮವರು ಒಬ್ಬರು ಶಾಸಕರಾಗೇ ಆಗ್ತಾರೆ. ಶಾಸಕ ಯತ್ನಾಳ್ ಮಂತ್ರಿ ಆಗ್ತಾರೆ, ಮುಖ್ಯಮಂತ್ರಿ ಆಗ್ತಾರೆ ಎಂದು ಅನೇಕರು ಹೊಟ್ಟೆಕಿಚ್ಚು ಪಟ್ಟರು. ನಾವು ಮನಸ್ಸು ಮಾಡಿದ್ದರೆ ಯತ್ನಾಳ್ ಮುಖ್ಯಮಂತ್ರಿ ಆಗಬಹುದಿತ್ತು. ನಮ್ಮ ಸಮಾಜಕ್ಕೆ ಮೊದಲು ಮೀಸಲಾತಿ ಕೊಡಿ, ಆಮೇಲೆ ಮಂತ್ರಿ, ಮುಖ್ಯಮಂತ್ರಿ ಎಂದು ಯತ್ನಾಳ್ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ: ಯತ್ನಾಳ್
Advertisement
Advertisement
ನಮ್ಮ ಜೀವ ಹೋದರೂ ಪರವಾಗಿಲ್ಲ, ಸಮಾಜಕ್ಕೆ ಮೀಸಲಾತಿ ಸಿಗಬೇಕು. ಕೆಲವರು ಇದ್ದಾರೆ. ಅವರು ಮಂತ್ರಿ, ಮುಖ್ಯಮಂತ್ರಿ ಆಗಬೇಕಂತೆ. ಅದಕ್ಕಾಗಿ ಮೂರನೇ ಒಕ್ಕೂಟ ಮಾಡುವುದಕ್ಕೆ ಹೊರಟಿದ್ದಾರೆ. ಸಿದ್ದಲಿಂಗ ಸ್ವಾಮಿಗಳು ಸೇರಿದಂತೆ ಕೆಲವು ಸ್ವಾಮೀಜಿಗಳೆ ನೀವು ದಯವಿಟ್ಟು ಸಮಾಜ ಒಡೆಯೋ ಕೆಲಸ ಮಾಡಬೇಡಿ. ಸಮಾಜ ಒಗ್ಗಟ್ಟಾಗಿದೆ, ಸಮಾಜಕ್ಕೆ ಮೀಸಲಾತಿ ಬೇಕಾಗಿದೆ. ಅದು ಹೇಗೆ ನೀವು ಮತ್ತೊಂದು ಪೀಠ ಮಾಡುತ್ತಿರಿ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನಿರಾಣಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ: ವಿಜಯಾನಂದ ಕಾಶಪ್ಪನವರ್
Advertisement
ನಮ್ಮ ಸಮಾಜಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಬ್ಬರೆ ಶ್ರೀಗಳು. ಅವರ ನೇತೃತ್ವದಲ್ಲಿ ನಾವು ಮೀಸಲಾತಿ ಪಡೆಯಬೇಕಾಗಿದೆ. ನಮಗೆ ರಾಜಕೀಯ ಮೀಸಲಾತಿ ಬೇಕಾಗಿಲ್ಲ. ನಾನು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿಲ್ಲ. ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಮೀಸಲಾತಿಯಿಂದ ಅನುಕೂಲ ಆಗುತ್ತದೆ. ಸಂದರ್ಭ ಬಂದರೆ ನಾನು ರಾಜಕೀಯ ಬಿಡುತ್ತೇನೆ, ಆದರೆ ಮೀಸಲಾತಿ ಹೋರಾಟ ಬಿಡುವುದಿಲ್ಲ. ಒಕ್ಕೂಟ ಮಾಡಿಕೊಂಡು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ ಪುಣ್ಯಾತ್ಮರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.