ವಿಜಯಪುರ: ಮೊದಲು ಉಸಿರಾಡೋದು ಕಷ್ಟ ಆಗಿತ್ತು. ಈಗ ಐಸಿಯು ನಿಂದ ಜನರಲ್ ವಾರ್ಡ್‍ಗೆ ಬಂದಂತಾಗಿದೆ. ಇನ್ಮುಂದೆ ಕೆಲಸಗಳು ವೇಗವಾಗಿ ಆಗಲಿವೆ ಎಂದು ಬಿ.ಎಸ್ ಯಡ್ಡಿಯೂರಪ್ಪ ಹಾಗೂ ವಿಜಯೇಂದ್ರಗೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯಪುರದ ಜಿಲ್ಲಾಡಳಿತ ಸಂಕೀರ್ಣವನ್ನು ಬಿಎಸ್‍ವೈ ಭೂಮಿ ಪೂಜೆ ಮಾಡಲು ಬರಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ ಅದು ಕ್ಯಾನ್ಸಲ್ ಆಗಿತ್ತು. ಈ ಕಾರ್ಯ ಬೊಮ್ಮಾಯಿ ಅಮೃತ ಹಸ್ತದಿಂದ ಆಗಬೇಕು ಎಂದಿತ್ತು, ಹಾಗಾಗಿ ಅದು ಈಗ ಆಯಿತು ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂಗೆ ಚಿಂತನೆ
Advertisement
Advertisement
ವಸತಿ ಸಚಿವ ವಿ. ಸೋಮಣ್ಣ ಫ್ರೀ ಹ್ಯಾಂಡ್ ಬಿಟ್ಟರೆ ಇನ್ನು ಬಹಳ ಮನೆಗಳನ್ನು ಕಟ್ಟುತ್ತಿದ್ದರು. ಬೊಮ್ಮಾಯಿ ಸಿಎಂ ಆಗಿ ಬಂದ ಮೇಲೆ ಈಗ ಸ್ವಲ್ಪ ಉಸಿರಾಡುತ್ತಿದ್ದಾರೆ. ವಿಜಯಪುರಕ್ಕೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡಿ. ನನಗೆ ಅಭಿವೃದ್ಧಿಗೆ ಎಷ್ಟುಬೇಕು ಅಷ್ಟು ಹಣ ಕೊಡಿ ಬೇರೆ ನಾನು ಏನೂ ಕೇಳುವುದಿಲ್ಲ ಎಂದು ಹೇಳಿದ್ದೇನೆ. ಎಷ್ಟು ಹಣ ತಿಂದು, ದುಬೈನಲ್ಲಿ ಮನೆ ಮಾಡಿ, ರೆಸಾರ್ಟ್ ಮಾಡಿ ಏನು ಮಾಡೋದಿದೆ? ಎಷ್ಟು ಇದ್ರೆ ಏನು? ಕೊರೊನಾ ಬಂದರೆ ಹೆಣ ಕೂಡ ಎತ್ತಿ ಬಿಸಾಕುತ್ತಾರೆ ಎಂದರು. ಇದನ್ನೂ ಓದಿ: ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್
Advertisement
Advertisement