ವಿಜಯಪುರ: ದಿನೇಶ್ ಗುಂಡುರಾವ್ (Dinesh Gundu Rao) ಮನೆ ಅಂದ್ರೆ ಅದು ಕಾಂಗ್ರೆಸ್ ಮನೆ. ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನದ (Pakistan) ಏಜೆಂಟರಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ತನ್ನ ವಿರುದ್ಧ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ (Tabu Rao) ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದಕ್ಕೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
Advertisement
ಯತ್ನಾಳ್ ಮನೆ ಅಂದರೆ ಅದು ಬಿಜೆಪಿ ಮನೆ. ಬಿಜೆಪಿ ಮನೆಯಲ್ಲಿ ದೇಶ ಭಕ್ತರೇ ಇರುತ್ತಾರೆ. ದಿನೇಶ್ ಗುಂಡೂರಾವ್ ಮನೆ ಅಂದ್ರೆ ಅದು ಕಾಂಗ್ರೆಸ್ ಮನೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದ್ರೆ ಏನು ಮಾಡುವುದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗ್ಯಾರಂಟಿ ಹೆಸರು ಹೇಳಿಕೊಂಡು ಹೋಗುವ ಶಾಸಕರಿಗೆ ಜನ ತಟ್ಟುತ್ತಾರೆ: ಗೋವಿಂದ ಕಾರಜೋಳ
Advertisement
Advertisement
ನಿಮ್ಮ ಮನೆ ಅಂದ್ರೆ ಯಾವುದು? ಅವರ ಮನೆ ಹಿಂಗಿದೆ ಅಂತಾ ಯಾರಿಗೆ ಗೊತ್ತು? ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನ ಏಜೆಂಟರಿದ್ದಾರೆ. ಕಾಂಗ್ರೆಸ್ಸಿಗರು ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನ ಸಮರ್ಥಿಸಿಕೊಂಡಿದ್ದರು. ಘೋಷಣೆ ಕೂಗಿಯೇ ಇಲ್ಲ ಎಂದು ಹೇಳಿದ್ದರು. ಈ ಕಾರಣಕ್ಕೆ ನಾನು ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿದ್ದೇನೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.
Advertisement
ನಾನು ಯಾವುದೇ ಮಹಿಳೆ ಬಗ್ಗೆ ಮಾತನಾಡಿಲ್ಲ. ನನ್ನ ಹೇಳಿಕೆಯಲ್ಲಿ ಸ್ತ್ರೀಲಿಂಗ, ಪುಲ್ಲಿಂಗ ಬಳಸಿಲ್ಲ. ಆ ಹೇಳಿಕೆ ನನಗೆ ಹೇಳಿದ್ದು ಎಂದು ಅವರು ತಿಳಿದುಕೊಂಡರೆ ಯತ್ನಾಳ್ ಏನು ಮಾಡಲು ಆಗುವುದಿಲ್ಲ ಎಂದರು. ಇದನ್ನೂ ಓದಿ: ಸಿಬಿಐಗೆ ಸಲ್ಲಿಸಿದ ದಾಖಲೆ ನಮಗೂ ನೀಡಿ – ಡಿಕೆಶಿಗೆ ಲೋಕಾಯುಕ್ತದಿಂದ ನೋಟಿಸ್
ಈಶ್ವರಪ್ಪ ಮೋದಿ ಫೋಟೋ ಹಾಕಿದ್ದಕ್ಕೆ ಬಿಜೆಪಿ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಫೋಟೋ ಹಾಕಲು ಯಾರ ತಕರಾರು ಇಲ್ಲ. ಅವರು ಇಡಿ ಜಗತ್ತಿನ ನಾಯಕ. ನಾನು ಮೋದಿ ಅಭಿಮಾನಿ ಅಂದರೆ ಏನು ಮಾಡಲು ಸಾಧ್ಯವಿಲ್ಲ. ಮೋದಿ ಪೋಟೋ ಹಾಕಲು ನಾನು ವಿರೋಧ ಮಾಡುವುದಿಲ್ಲ ಎಂದು ಹೇಳಿ ಈಶ್ವರಪ್ಪ ಪರ ಬ್ಯಾಟ್ ಬೀಸಿದರು.